ಕೊಡಗು:ಸಮವಸ್ತ್ರ ಸಮಾನತೆಯ ಸಂಕೇತ.ಶಾಲೆಗಳಲ್ಲಿ ಎಲ್ಲರೂ ಒಂದೇ ಎಂಬ ಕಾರಣಕ್ಕೆ ಸಮವಸ್ತ್ರ ನಿಯಮ ಜಾರಿ ಮಾಡಲಾಗಿದೆ ಎಂದು ಮಡಿಕೇರಿಯಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿದರು. ಹಿಜಾಬ್-ಕೇಸರಿ ಶಾಲು ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನೀವು ಹಿಜಾಬ್ ಹಾಕಿಕೊಂಡಾದರು ಹೋಗಿ, ಬುರ್ಖಾ ಹಾಕಿಕೊಂಡಾದರು ಹೋಗಿ ಅಥವಾ ಮೊಣಕಾಲು ಕಾಣುವಂತಹ ಜುಬ್ಬಾ ಪೈಜಾಮಾ ಹಾಕಿಕೊಂಡಾದರು ಹೋಗಿ. ಆದರೆ ನೀವು ಹೋಗಬೇಕಾದ ಸ್ಥಳ ಶಾಲೆ ಅಥವಾ ಕಾಲೇಜಲ್ಲ, ಮದರಸಾ ಎಂದು ಕಿಡಿಕಾರಿದ್ದಾರೆ.
ನಾವು ಹಿಜಾಬ್ಗೋಸ್ಕರ ಶಾಲೆಗೆ ಹೋಗುತ್ತೇವೆ ಎಂದು ಹೇಳುತ್ತಾರೆ. ಹಾಗೇ ಹೋಗುವುದೇ ಆದಲ್ಲಿ ಮದರಸಾಕ್ಕೆ ಹೋಗಲಿ. ನಿಮಗೆ ಪ್ರತ್ಯೇಕ ದೇಶ ನೀಡಿದಾಗ ಅಲ್ಲಿಗೇ ಹೋಗಬಹುದಿತ್ತಲ್ಲ? ಇಲ್ಲಿ ಉಳಿದ ಮೇಲೆ ಈ ದೇಶದ ನೀತಿ ನಿಯಮಗಳನ್ನು ಪಾಲಿಸಿ, ಗೌರವಿಸಬೇಕು. 1947ರಲ್ಲಿ ದೇಶವನ್ನು ವಿಭಜನೆ ಮಾಡಿ ಎರಡು ದೇಶವನ್ನು ನಿಮಗೇ ನೀಡಲಾಗಿತ್ತಲ್ಲ, ಆಗಲೇ ಹೋಗಬೇಕಿತ್ತು. ಯಾಕೆ ಉಳಿದುಕೊಂಡ್ರಿ? ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.
ಹಿಜಾಬ್ ವಿವಾದದ ಬಗ್ಗೆ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ಗಣೇಶ, ಸರಸ್ವತಿ ಪೂಜೆ, ಕುಂಕುಮ, ಬಳೆಯ ಬಗ್ಗೆ ಮಾತನಾಡುವವರು ಮೊದಲು ತಿಳಿಯಬೇಕಾಗಿರುವುದು ಇದು ಬ್ರಿಟಿಷರ ಇಂಡಿಯಾ ಅಲ್ಲ ಎನ್ನುವುದನ್ನು. ಇದು ಭಾರತ, ಭಾರತದ ಬುನಾದಿಯೇ ಹಿಂದೂ ಧರ್ಮ. ಈ ದೇಶದ ಸಂಸ್ಕೃತಿಯನ್ನು ಪ್ರಶ್ನೆ ಮಾಡುವ ಹಕ್ಕು ನಿಮಗಿಲ್ಲ. ಆಶ್ರಯ ಬೇಡಿ ನೀವುಗಳು ನಮ್ಮ ದೇಶಕ್ಕೆ ಬಂದಿದ್ದೀರಿ. ನಮ್ಮ ಮೂಲ ಸಂಸ್ಕೃತಿಯನ್ನು ಪ್ರಶ್ನೆ ಮಾಡುವ ಹಕ್ಕು ನಿಮಗಿಲ್ಲ ಎಂದರು.
ಶ್ರೀರಂಗಪಟ್ಟಣ-ಗುಡ್ಡೆಹೊಸೂರು ಚತುಷ್ಪಥ ನಿರ್ಮಾಣಕ್ಕೆ ಶೀಘ್ರ ಚಾಲನೆ:ಶ್ರೀರಂಗಪಟ್ಟಣದಿಂದ ಗುಡ್ಡೆಹೊಸೂರುವರೆಗೆ ನಾಲ್ಕು ಪಥದ ರಸ್ತೆ ನಿರ್ಮಾಣಕ್ಕೆ ಮೇ ಅಥವಾ ಜೂನ್ ತಿಂಗಳಲ್ಲಿ ಚಾಲನೆ ದೊರೆಯಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ನಗರದ ಸುದರ್ಶನ ಅತಿಥಿ ಗೃಹದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 4 ಸಾವಿರ ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗುತ್ತದೆ. ಮೈಸೂರು ಜಿಲ್ಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಎರಡೂವರೆ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಚಿಕ್ಕಬಳ್ಳಾಪುರದಲ್ಲಿ 6 ಕೆಜಿ ಗಾಂಜಾ ವಶಕ್ಕೆ, ನಾಲ್ವರು ಆರೋಪಿಗಳ ಬಂಧನ
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೊಡಗು ಮತ್ತು ಮೈಸೂರು ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡಿದ್ದು, ಆ ನಿಟ್ಟಿನಲ್ಲಿ ರಸ್ತೆ, ಸಾರಿಗೆ ಸಂಪರ್ಕಕ್ಕೆ ಒತ್ತು ನೀಡಲಾಗಿದೆ. ಶ್ರೀರಂಗಪಟ್ಟಣ ಬಳಿ ಡಿವಿಯೇಷನ್ ನೀಡಿ, ಶ್ರೀರಂಗಪಟ್ಟಣದಿಂದ ಪಿರಿಯಾಪಟ್ಟಣದವರೆಗೆ ಪ್ಯಾಕೇಜ್ 3 ಮತ್ತು ಪಿರಿಯಾಪಟ್ಟಣದಿಂದ ಗುಡ್ಡೆಹೊಸೂರುವರೆಗೆ ಪ್ಯಾಕೇಜ್ 2ನಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಈ ಯೋಜನೆ ದೊಡ್ಡ ಮೊತ್ತದ ಟೆಂಡರ್ ಕಾಮಗಾರಿ ಆಗಿರುವುದರಿಂದ 3 ತಿಂಗಳ ಕಾಲಾವಕಾಶ ಬೇಕಿದೆ. ರಸ್ತೆ ನಿರ್ಮಾಣ ಸಂಬಂಧ ಈಗಾಗಲೇ ಗುರುತಿಸಿರುವ ರಸ್ತೆ ಪಥದ ಮಾರ್ಗದಲ್ಲಿ ಭೂಮಿ ಸೇರಿದಂತೆ ಬೆಲೆ ಬಾಳುವ ಗಿಡ ಮರಗಳಿಗೆ ಬೆಲೆ ನಿಗದಿಮಾಡಿ ಪರಿಹಾರ ನೀಡಬೇಕಿದೆ. ಆ ನಿಟ್ಟಿನಲ್ಲಿ ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ನಾಲ್ಕು ಪಥ ರಸ್ತೆ ಹೆಚ್ಚಿನ ಕಾಮಗಾರಿಯು ಮೈಸೂರು ಜಿಲ್ಲೆ ವ್ಯಾಪ್ತಿಗೆ ಬರಲಿದೆ. ಕೊಡಗು ಜಿಲ್ಲೆಯಲ್ಲಿ ಸ್ವಲ್ಪ ಭಾಗ ಮಾತ್ರ ಬರಲಿದೆ. ಒಟ್ಟಾರೆ ಸುಸಜ್ಜಿತ ರಸ್ತೆ ನಿರ್ಮಾಣ ಆಗಲಿದೆ ಎಂದು ಪ್ರತಾಪ್ ಸಿಂಹ ವಿವರಿಸಿದರು.
ಶ್ರೀರಂಗಪಟ್ಟಣ-ಗುಡ್ಡೆಹೊಸೂರು ಚತುಷ್ಪಥ ನಿರ್ಮಾಣಕ್ಕೆ ಶೀಘ್ರ ಚಾಲನೆ: ಎಂಪಿ ಪ್ರತಾಪ್ ಸಿಂಹ ಗ್ಯಾಸ್ ಪೈಪ್‍ಲೈನ್ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಂಸದರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರಾದ್ಯಾಂತ ನಲ್ಲಿ ನೀರು ಮಾದರಿಯಲ್ಲಿ ಪ್ರತಿ ಮನೆಗೂ ಗ್ಯಾಸ್ ಪೈಪ್‍ಲೈನ್ ಅಳವಡಿಸಬೇಕು ಎಂಬುದು ಅವರ ದೂರದೃಷ್ಟಿ ಆಗಿದೆ . ಸದ್ಯ ರಾಜ್ಯದ 20 ನಗರಗಳಲ್ಲಿ ಗ್ಯಾಸ್ ಪೈಪ್‍ಲೈನ್ ಅಳವಡಿಸುವ ಕಾಮಗಾರಿ ಆರಂಭವಾಗಿದೆ. ಗ್ಯಾಸ್ ಪೈಪ್‍ಲೈನ್ ಅನ್ನು ಹಂತ ಹಂತವಾಗಿ ಎಲ್ಲಾ ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಲಾಗುತ್ತದೆ ಎಂದು ತಿಳಿಸಿದರು.
ರೈಲ್ವೆ ಯೋಜನೆ ಬಗ್ಗೆ ಪ್ರತಿಕ್ರಿಯಿಸಿದ ಸಂಸದರು ಕುಶಾಲನಗರದವರೆಗೆ ರೈಲು ನಿರ್ಮಾಣ ಕಾಮಗಾರಿ ಆಗಲಿದೆ. ಆ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ತಲಾ ಶೇ.50ರಷ್ಟು ಹಣ ಭರಿಸಬೇಕಿದೆ. ಸುಮಾರು 1,854 ಕೋಟಿ ರೂ. ಅಂದಾಜು ಮಾಡಲಾಗಿದೆ ಎಂದು ಪ್ರತಾಪ್ ಸಿಂಹ ತಿಳಿಸಿದರು