ವಿರಾಜಪೇಟೆ (ಕೊಡಗು): ಅಪರೂಪದ ಎರಡು ತಲೆಯ ಹಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಅರಣ್ಯ ಸಂಚಾರಿ ದಳದ ಸಿಬ್ಬಂದಿ ವಿರಾಜಪೇಟೆ ತಾಲೂಕಿನ ಆನಂದಪುರದ ಬಳಿ ಬಂಧಿಸಿದ್ದಾರೆ.
ಎರಡು ತಲೆ ಹಾವು ಮಾರಾಟಕ್ಕೆ ಯತ್ನ: ಆರೋಪಿಯ ಬಂಧನ
ಎರಡು ತಲೆಯ ಹಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಅರಣ್ಯ ಸಂಚಾರಿ ದಳದ ಸಿಬ್ಬಂದಿ ಬಂಧಿಸಿದ್ದಾರೆ.
arrest
ಮೈಸೂರಿನ ಶಾಂತಿನಗರ ನಿವಾಸಿ ಸೈಯದ್ ಮೋಮಿನ್ ಬಂಧಿತ ಆರೋಪಿ. ಈತ ದಾವಣಗೆರೆ ಜಿಲ್ಲೆಯ ಚನ್ನಗಿರಿಯ ನಲ್ಲೂರಿನಿಂದ ತಂದ ಹಾವನ್ನು ಸಮೀಪದ ಆನಂದಪುರದ ತಂಗುದಾಣದ ಬಳಿ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಸಿಐಡಿ ಪೊಲೀಸರು ಹಾಗೂ ಅರಣ್ಯ ಸಂಚಾರಿ ದಳದವರು ಬಂಧಿಸಿದ್ದಾರೆ.
ಆರೋಪಿಯಿಂದ ನಾಲ್ಕು ಅಡಿ ಉದ್ದದ ಹಾವನ್ನು ವಶಪಡಿಸಿಕೊಂಡು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Last Updated : Sep 19, 2020, 3:05 PM IST