ಮಡಿಕೇರಿ (ಕೊಡಗು):ಮಡಿಕೇರಿಯಲ್ಲಿ ಅದ್ಧೂರಿ ಯುವ ದಸರಾ ಆಚರಿಸಲಾಯಿತು. ನಗರದ ಗಾಂಧಿ ಮೈದಾನದಲ್ಲಿ ಟೀಮ್ ಕಿಂಬರ್ಲಿ ನೇತೃತ್ವದಲ್ಲಿ ಯುವ ಕಲೋತ್ಸವ ಜರುಗಿತು.
6ನೇ ದಿನ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಕಲಾ ತಂಡಗಳ ಸದಸ್ಯರು ನೃತ್ಯ ಮಾಡಿದ್ರು. ಗ್ರೂಪ್ ಡ್ಯಾನ್ಸ್ ಹಾಗೂ ರ್ಯಾಪ್ ಸಾಂಗ್ಗಳು ಜನರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದವು. ರ್ಯಾಂಪ್ ವಾಕ್ ಅಲ್ಲಿ ಸೇರಿದ್ದ ಪ್ರೇಕ್ಷಕರಿಗೆ ಮನೋರಂಜನೆ ನೀಡಿತು. ಕಾರ್ಯಕ್ರಮದಲ್ಲಿ ದೇಶಿ ಉಡುಗೆಯ ಫ್ಯಾಷನ್ ಶೋ ಜನರ ಮೆಚ್ಚುಗೆಗೆ ಪಾತ್ರವಾಯಿತು.
ಸಿನಿ ಕಲಾವಿದರು ಆಗಮಿಸಿದ್ದು ಕಾರ್ಯಕ್ರಮದ ಆಕರ್ಷಣೆಯಾಗಿತ್ತು. ಪಾಯಲ್ ಚಂಗಪ್ಪ, ಹರಿಕಥೆ ಅಲ್ಲ ಗಿರಿ ಕಥೆ ಖ್ಯಾತಿಯ ತಪಸ್ವಿ, ಕೊಡಗಿನ ಬೆಡಗಿ ತೇಜಸ್ವಿನಿ, ಕೆ.ಜಿ.ಎಫ್ ಖ್ಯಾತಿಯ ತಾರಖ್ ಅಯ್ಯಪ್ಪ ಹಾಗೂ ಅನು ಅಯ್ಯಪ್ಪ, ಬಿಗ್ ಬಾಸ್ ಖ್ಯಾತಿಯ ರಘು ಮಡಿಕೇರಿ ಯುವ ದಸರಾದ ಮೆರುಗು ಹೆಚ್ಚಿಸಿದ್ರು. ಪುನೀತ್ ಅಭಿನಯದ ನಿನ್ನ ಜೊತೆ ನನ್ನ ಕಥೆ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ರು ಎನ್ಸಿ ಅಯ್ಯಪ್ಪ ಜೋಡಿ. ಕೊಡಗಿನ ವಾಲಗಕ್ಕೂ ಅಯ್ಯಪ್ಪ ಜೋಡಿ ಹೆಜ್ಜೆ ಹಾಕಿದ್ರು.
ಮಡಿಕೇರಿ ಯುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಇದನ್ನೂ ಓದಿ:ಮಡಿಕೇರಿ ಮಹಿಳಾ ದಸರಾ.. ಬಲೂನ್ ಶೂಟ್, ಮದರಂಗಿ ಸ್ಪರ್ಧೆ, ಅತ್ತೆ-ಸೊಸೆ ಜುಗಲ್ ಬಂದಿ
ನಟ ವಶಿಷ್ಟ ಸಿಂಹನಿಗೆ ಮಡಿಕೇರಿಯಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ವೇದಿಕೆಯಲ್ಲಿ ಹಾಡು, ಡೈಲಾಗ್ ಹೇಳುವ ಮೂಲಕ ಕೊಡಗಿನ ಜನತೆಯನ್ನು ಆಕರ್ಷಿಸಿದ್ರು. ಬೊಂಬೆ ಹೇಳುತೈತೆ ಹಾಡು ಹೇಳುವ ಮೂಲಕ ಅಪ್ಪು ಸ್ಮರಣೆ ಮಾಡಲಾಯಿತು. ಅಪ್ಪುವಿನ ಹಾದಿಯನ್ನೇ ಯುವಕರು ಮೈಗೂಡಿಸಿಕೊಳ್ಳುವಂತೆ ವಶಿಷ್ಟ ಕಿವಿಮಾತು ಹೇಳಿದ್ರು.