ಕರ್ನಾಟಕ

karnataka

ETV Bharat / state

ಕೊಡಗಿನಲ್ಲಿ ಮಳೆ ಅಬ್ಬರ: ಮನೆಗಳಿಗೆ ನುಗ್ಗಿದ ನೀರು, ಜನಜೀವನ ಅಸ್ತವ್ಯಸ್ತ - madikeri rain effects

ಕೊಡಗಿನಲ್ಲಿ ಮಳೆ ಮುಂದುವರಿದಿದೆ. ಮನೆಗಳಿಗೆ ನುಗ್ಗಿದ ನೀರು ಹೊರಹಾಕುವಲ್ಲೇ ಜನ ಹೈರಾಣಾಗಿದ್ದಾರೆ.

madikeri rain leads to problem
ಕೊಡಗಿನಲ್ಲಿ ಮಳೆ ಅಬ್ಬರ

By

Published : Sep 3, 2022, 6:45 AM IST

Updated : Sep 3, 2022, 12:21 PM IST

ಮಡಿಕೇರಿ(ಕೊಡಗು): ಕೊಡಗು ಜಿಲ್ಲೆಯಲ್ಲಿ ಮಳೆ ಅಬ್ಬರ ಜೋರಾಗಿ‌ದ್ದು, ಭಾರಿ ಅವಾಂತರ ಸೃಷ್ಟಿಯಾಗಿದೆ. ಈವರೆಗೆ ಮಡಿಕೇರಿ ಸುತ್ತಮುತ್ತಲಿನ ಬೆಟ್ಟ ಕುಸಿತ, ಜಲಪ್ರಳಯದಂತಹ ಸಮಸ್ಯೆ ಎದುರಾಗುತ್ತಿತ್ತು. ಆದ್ರೀಗ ಮಡಿಕೇರಿ ನಗರದಲ್ಲೇ ಭಾರಿ ಅನಾಹುತ ಆಗಿದೆ. ನಿರಂತರ ಮಳೆಗೆ ಮಡಿಕೇರಿ ಜನತೆ ಸಂಕಷ್ಟ ಎದುರಿಸುತ್ತಿದ್ದಾರೆ.

ಮಡಿಕೇರಿ ಬಡಾವಣೆಯ ಮನೆಗಳಿಗೆ ನೀರು ನುಗ್ಗಿದೆ. ನಗರದ ಪ್ರಕೃತಿ ಬಡಾವಣೆ, ಕಾವೇರಿ ಲೇಔಟ್, ಮುಳಿಯ ಲೇಜೌಟ್​ಗಳಲ್ಲಿ ನೀರು ಚರಂಡಿಯಲ್ಲಿ ‌ಹೋಗದೆ ರಸ್ತೆ ಮೇಲೆ ಹರಿಯುತ್ತಿದ್ದು, ಮನೆಯ ಒಳಗೆ ನೀರು ನುಗ್ಗಿ ಭಾರಿ ಅವಾಂತರ ಸೃಷ್ಟಿ ಮಾಡಿದೆ. ಅಪಾರ ಪ್ರಮಾಣದ ಗೃಹೋಪಯೋಗಿ ವಸ್ತುಗಳು ನೀರುಪಾಲಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೊಡಗು ಮಳೆ ಅವಾಂತರ

ಹಲವು ವರ್ಷಗಳಿಂದ ಮಡಿಕೇರಿ ನಗರದ ಚರಂಡಿಗಳನ್ನು ಸ್ವಚ್ಛಗೊಳಿಸದಿರುವ ಕಾರಣ ನೀರು ರಸ್ತೆ ಮೇಲೆ ನಿಂತು ಬಳಿಕ ಮನೆಯೊಳಗೆ ನುಗ್ಗಿದೆ. ರಸ್ತೆಯ ಮೇಲೆ ನೀರು ನಿಂತ ಕಾರಣ, ಸಂಚಾರ ಸ್ಥಗಿತಗೊಂಡಿದೆ. ಈ ಹಿನ್ನೆಲೆ ನಗರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಜನರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:ರಾಜಧಾನಿಯಲ್ಲಿ ಸೆಪ್ಟೆಂಬರ್ 1 ರಂದು 45 ಸಾವಿರ ಗಣೇಶ ಮೂರ್ತಿಗಳ ನಿಮಜ್ಜನ: ಬಿಬಿಎಂಪಿ

Last Updated : Sep 3, 2022, 12:21 PM IST

ABOUT THE AUTHOR

...view details