ಕರ್ನಾಟಕ

karnataka

By

Published : Jun 29, 2020, 6:24 PM IST

ETV Bharat / state

ಕೊಡಗಿನಲ್ಲಿ ಕೊರೊನಾತಂಕ: ಕೆಎಸ್‌ಆರ್​​ಟಿಸಿ ಪ್ರಯಾಣದಿಂದ ಹಿಂದೆ ಸರಿದ ಪ್ರಯಾಣಿಕರು!

ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವುದರಿಂದ ಸಾರ್ವಜನಿಕರು ಪ್ರಯಾಣಕ್ಕೆ ಹಿಂದೇಟು ಹಾಕುತ್ತಿದ್ದು, ಪರಿಣಾಮ ಕೆಎಸ್‌ಆರ್‌ಟಿಸಿ ಬಸ್‌ಗಳು ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿವೆ.

lockdown effect on ksrtc in kodagu
ಕೆಎಸ್‌ಆರ್​​ಟಿಸಿ

ಕೊಡಗು: ಜಿಲ್ಲೆಯಲ್ಲಿ ದಿನ ಕಳೆದಂತೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಇದರ ಮಧ್ಯೆ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಸೋಸಿಯೇಷನ್ ವತಿಯಿಂದ ಜುಲೈ 4ರವರೆಗೆ ಲಾಕ್‌ಡೌನ್ ಘೋಷಿಸಿರುವುದರಿಂದ ಕೆಎಸ್‌ಆರ್​​ಟಿಸಿ ಪ್ರಯಾಣಕ್ಕೆ ಜನ ಮುಂದಾಗುತ್ತಿಲ್ಲ.

ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವುದರಿಂದ ಸಾರ್ವಜನಿಕರು ಪ್ರಯಾಣಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ ಲಾಕ್​ಡೌನ್​ ಕೂಡಾ ಜಾರಿಯಲ್ಲಿರುವುದರ ಪರಿಣಾಮ ಕೆಎಸ್‌ಆರ್‌ಟಿಸಿ ಬಸ್‌ಗಳು ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿವೆ.

ಕೆಎಸ್‌ಆರ್​​ಟಿಸಿ ಪ್ರಯಾಣದಿಂದ ಹಿಂದೆ ಸರಿದ ಪ್ರಯಾಣಿಕರು

ಲಾಕ್‌ಡೌನ್ ಸಡಿಲಿಕೆ ನಂತರ ಸ್ಥಳೀಯ ರೂಟ್‌ಗಳಲ್ಲಿ ಸಂಚರಿಸುತ್ತಿದ್ದ ಬಸ್‌ಗಳನ್ನು ನಿಂತಲ್ಲೇ ನಿಲ್ಲಿಸುವಂತೆ ಆಗಿದೆ. ಚೇಂಬರ್ ಆಫ್ ಕಾಮರ್ಸ್‌ನಿಂದ ಲಾಕ್‌ಡೌನ್ ಘೋಷಿಸಿದ ಬಳಿಕ ನಿರೀಕ್ಷಿತ ಪ್ರಮಾಣದಲ್ಲಿ ಸಾರ್ವಜನಿಕರು ಪ್ರಯಾಣ ಮಾಡುತ್ತಿಲ್ಲ ಎಂದು ಮಡಿಕೇರಿ ಘಟಕದ ಕಾರ್ಯನಿರ್ವಹಣಾಧಿಕಾರಿ ಮಲ್ಲಿಕಾರ್ಜುನ್​​ ಹೇಳಿದ್ದಾರೆ.

ABOUT THE AUTHOR

...view details