ಕರ್ನಾಟಕ

karnataka

ETV Bharat / state

ಛಾಯಾಗ್ರಾಹಕರಿಗೂ ತಟ್ಟಿದ ಲಾಕ್‌ಡೌನ್ ಬಿಸಿ: ಕ್ಯಾಮರಾ ಹಿಡಿಯುತ್ತಿದ್ದ ಕೈಗಳಿಂದ ಹಣ್ಣು-ತರಕಾರಿ ಮಾರಾಟ

ಕೊರೊನಾ ತಡೆಗೆ ಘೋಷಣೆಯಾದ ಲಾಕ್​ಡೌನ್​ ಎಫೆಕ್ಟ್​​​ ಯಾರನ್ನೂ ಬಿಟ್ಟಿಲ್ಲ. ಇದೀಗ ಛಾಯಾಗ್ರಾಹಕರು ಸಹ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

Lockdown effcts on Photographers
ಛಾಯಾಗ್ರಾಹಕರಿಗೂ ತಟ್ಟಿದ ಲಾಕ್‌ಡೌನ್ ಬಿಸಿ: ಕ್ಯಾಮೆರಾ ಹಿಡಿಯುತ್ತಿದ್ದ ಕೈಯಿಂದ ಹಣ್ಣು-ತರಕಾರಿ ಮಾರಾಟ

By

Published : Apr 26, 2020, 3:09 PM IST

ಮಡಿಕೇರಿ(ಕೊಡಗು): ಕೊರೊನಾ ತಡೆಗೆ ಲಾಕ್​​ಡೌನ್​​ ಆದ ಪರಿಣಾಮ ಛಾಯಾಗ್ರಾಹಕರ ಬದುಕು ಸಹ ಸಂಕಷ್ಟದಲ್ಲಿದೆ.

ವರ್ಷದ 6 ತಿಂಗಳು ಮದುವೆ, ನಾಮಕರಣ, ಪ್ರಿವೆಡ್ಡಿಂಗ್ ಹೀಗೆ ಹಲವಾರು ಸುಸಂದರ್ಭಗಳಲ್ಲಿ ಫೋಟೋ ಹಾಗೂ ವಿಡಿಯೋ ಮಾಡಿಕೊಂಡು ಜೀವನ ನಡೆಸುತ್ತಿದ್ದ ಹಲವು ಕುಟುಂಬಗಳ ಮೇಲೆ ಲಾಕ್​ಡೌನ್​​ ಎಫೆಕ್ಟ್​​ ತಟ್ಟಿದ್ದು, ಇದಕ್ಕೆ ಮಂಜಿನ ನಗರಿ ಕೊಡಗು ಕೂಡಾ ಹೊರತಾಗಿಲ್ಲ.‌ ಏಕಾಏಕಿ ದೇಶಾದ್ಯಂತ ಲಾಕ್‍ಡೌನ್ ಘೋಷಿಸಿದ್ದರಿಂದ ಮದುವೆ ಹಾಗೂ ಶುಭ ಸಮಾರಂಭಗಳೆಲ್ಲವೂ ರದ್ದಾಗಿವೆ.‌ ಇದರಿಂದ ಯಾವುದೇ ಕಾರ್ಯಕ್ರಮಗಳಿಲ್ಲದ ಪರಿಣಾಮ‌ ವ್ಯವಹಾರವೂ ಇಲ್ಲದೆ 300ಕ್ಕೂ ಹೆಚ್ಚು ಛಾಯಾಗ್ರಾಹಕರ ಕುಟುಂಬಗಳು ಪ್ರತಿನಿತ್ಯ ಪರದಾಡುವಂತಾಗಿದೆ.

ಛಾಯಾಗ್ರಾಹಕರಿಗೂ ತಟ್ಟಿದ ಲಾಕ್‌ಡೌನ್ ಬಿಸಿ

ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಸ್ಟುಡಿಯೋ ಆರಂಭಿಸಿದ್ದವರ ಪಾಡಂತೂ ಹೇಳತೀರದ್ದಾಗಿದೆ. ಕೆಲವರು ಬದುಕಿನ ಬಂಡಿ ಎಳೆಯಲು ಬೇರೆ ದಾರಿ ಕಾಣದೆ ನಗರಗಳು ಹಾಗೂ ಹಳ್ಳಿ, ಹಳ್ಳಿಗಳಿಗೆ ಹೋಗಿ ಹಣ್ಣು, ತರಕಾರಿ ಮಾರಾಟ ಮಾಡುತ್ತಿದ್ಧಾರೆ. ತೀರಾ ಸಂಕಷ್ಟದಲ್ಲಿರುವ ಛಾಯಾಗ್ರಾಹಕರಿಗೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ನೀಡಬೇಕೆಂದು ಮನವಿ ಮಾಡಿದ್ದಾರೆ.

ABOUT THE AUTHOR

...view details