ಕರ್ನಾಟಕ

karnataka

ETV Bharat / state

ಕೊರೊನಾ ಸೋಂಕಿತನ ಜೊತೆ 33 ಜನರ ಪ್ರಯಾಣ : ಕಗ್ಗಂಟಾದ ಸಹ ಪ್ರಯಾಣಿಕರು ಗುರುತು - ಕೊರೊನಾ ರೋಗ

ಕೊರೊನಾ ವೈರಸ್​​ ಸೋಂಕಿತ ವ್ಯಕ್ತಿಯೊಬ್ಬನ ಜೊತೆ ಬಸ್​ನಲ್ಲಿ 33 ಜನ ಪ್ರಯಾಣ ಮಾಡಿದ್ದಾರೆ. ಒಬ್ಬರೂ ಕೂಡಾ ಆಸನಗಳನ್ನು ಕಾಯ್ದಿರಿಸದ ಹಿನ್ನೆಲೆ ಸಹ ಪ್ರಯಾಣಿಕರ ವಿಳಾಸ ಪತ್ತೆ ಹಚ್ಚುವುದು ಕ್ಲಷ್ಟಕರ ಕೆಲಸವಾಗಿ ಪರಿಣಮಿಸಿದೆ.

kodagu-33-travelers-traveled-with-corona-virus-infected-person
ಜಿಲ್ಲಾಧಿಕಾರಿ ಅನ್ನೀಸ್‌ ಕಣ್ಮಣಿ ಜಾಯ್

By

Published : Mar 20, 2020, 5:16 AM IST

ಕೊಡಗು: ಕೋವಿಡ್ 19 ಪಾಸಿಟಿವ್ ಪ್ರಕರಣದ ಸೋಂಕಿತ ವ್ಯಕ್ತಿ ಪ್ರಯಾಣ ಬೆಳೆಸಿದ್ದ ಎನ್ನಲಾದ ರಾಜಹಂಸ ಬಸ್ಸಿನಲ್ಲಿದ್ದ 33 ಮಂದಿ ಪ್ರಯಾಣಿಕರಲ್ಲಿ ಒಬ್ಬರೂ ಕೂಡ ಆಸನಗಳನ್ನು ಕಾಯ್ದಿರಿಸಿರಲಿಲ್ಲ ಎನ್ನಲಾಗಿದ್ದು, ರಿಜರ್ವ್​ ಮಾಡದೇ ಇರುವುದರಿಂದ ಇನ್ನುಳಿದ 32 ಮಂದಿಯನ್ನು ಗುರುತಿಸುವುದು ಸವಾಲಾಗಿದೆ.

ಕೆಎ 19 ಎಫ್​ 3170 ಸಂಖ್ಯೆಯ ಬಸ್​ನಲ್ಲಿ 33 ಜನರ ಜೊತೆ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ಪ್ರಯಾಣ ಮಾಡಿದ್ದು, ಸಹ ಪ್ರಯಾಣಿಕರಿಗೂ ಸೋಂಕು ತಗುಲಿರುವ ಅನುಮಾನ ಮೂಡಿದೆ. ಇದರಿಂದ ಬಸ್​ನಲ್ಲಿ ಪ್ರಯಾಣಿಸಿದ ಪ್ರಯಾಣಿಕರು ಸಹಾಯವಾಣಿಗೆ ಕರೆ ಮಾಡಿ ಹತ್ತಿರ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಲು ಮನವಿ ಜಿಲ್ಲಾಧಿಕಾರಿ ಅನ್ನೀಸ್‌ ಕಣ್ಮಣಿ ಜಾಯ್ ಮಾಡಿದ್ದಾರೆ.

ಕೊರೊನಾ ಸೋಂಕಿತನ ಜೊತೆ 33 ಜನರ ಪ್ರಯಾಣ
  • ಸೋಂಕಿತ ವ್ಯಕ್ತಿಯ ಪ್ರಯಾಣದ ಮಾಹಿತಿ

    ಮಾರ್ಚ್ 15ರಂದು ದುಬೈನಿಂದ ಸಂಜೆ 4.30ಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮನ.
    ಅಂದೇ ವಿಮಾನ ನಿಲ್ದಾಣದಿಂದ ಬಿಎಂಟಿಸಿ ಬಸ್‌ ಮೂಲಕ ಮೈಸೂರು ರಸ್ತೆಯಲ್ಲಿರುವ ಸ್ಯಾಟಲೈಟ್‌ ಬಸ್‌ ನಿಲ್ದಾಣಕ್ಕೆ ಸಂಜೆ 6.30ರ ವೇಳೆಗೆ ಆಗಮನ.
    ರಾತ್ರಿ 7ರ ಹೊತ್ತಿಗೆ ಬೆಂಗಳೂರಿನ ಮಲ್ಲೇಶ್ವರಂ ಆಲ್‌ಬೇಕ್‌ ಹೋಟೆಲ್‌ಗೆ ಭೇಟಿ. ಅಲ್ಲಿ ಊಟ.
    ರಾತ್ರಿ 10ಕ್ಕೆ ಆಟೋದಲ್ಲಿ ಸ್ಯಾಟಲೈಟ್‌ ನಿಲ್ದಾಣಕ್ಕೆ ಆಗಮನ.
    ನಿಲ್ದಾಣದಲ್ಲಿ ರಾತ್ರಿ 11.30ರ ತನಕ ಕಾದು, ರಾಜಹಂಸ ಮೂಲಕ ಕೊಡಗಿನ ಮೂರ್ನಾಡಿಗೆ ಪ್ರಯಾಣ.
    ರಾತ್ರಿ 2.30ರ ಸುಮಾರಿಗೆ ಬಸ್‌ ನಿಲ್ದಾಣಕ್ಕೆ ಆಗಮನ.
    ಮಾರ್ಚ್ 16ರಂದು ಬೆಳಿಗ್ಗೆ ಮೂರ್ನಾಡಿಗೆ ಬಂದಿಳಿದ ವ್ಯಕ್ತಿ.
    ಅಂದೇ ಬೆಳಿಗ್ಗೆ 6ರಿಂದ 11ರ ತನಕ ಮನೆಯಲ್ಲಿ ವಾಸ್ತವ್ಯ.
    ಬೆಳಿಗ್ಗೆ 11.30ಕ್ಕೆ ಕುಂಜಿಲ ಗ್ರಾಮದಲ್ಲಿರುವ ಸಹೋದರಿಯ ಮನೆಗೆ ಕುಟುಂಬಸ್ಥರೊಂದಿಗೆ ಸ್ವಂತ ಕಾರಿನಲ್ಲಿ ಪ್ರಯಾಣ.
    ಮಧ್ಯಾಹ್ನ 2ರಿಂದ 3ರ ತನಕ ಕುಂಜಿಲ ದರ್ಗಾಕ್ಕೆ ಭೇಟಿ.
    ಮಧ್ಯಾಹ್ನ 3ರಿಂದ ಸಂಜೆ 6ರ ನಡುವೆ ಗ್ರಾಮದ ಮತ್ತೊಬ್ಬರ ಮನೆಗೆ ಭೇಟಿ.
    ರಾತ್ರಿ 8ಕ್ಕೆ ಕೊಂಡಂಗೇರಿ ಮನೆಗೆ ಭೇಟಿ.
    ಮಾರ್ಚ್‌ 17ರಂದು ಸ್ವಂತ ಕಾರಿನಲ್ಲಿ ಸ್ನೇಹಿತನ ಜೊತೆಗೆ ಮಡಿಕೇರಿ ಜನರಲ್‌ ತಿಮ್ಮಯ್ಯ ವೃತ್ತಕ್ಕೆ ಆಗಮನ. ನಂತರ, ವೈದ್ಯಕೀಯ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲು.

ABOUT THE AUTHOR

...view details