ಮಡಿಕೇರಿ: ಗೋ ಮಾಂಸಕ್ಕಾಗಿ ಹೊಟ್ಟೆಯಲ್ಲಿ ಕರು ಇರುವಾಗಲೇ ಗುಂಡು ಹಾರಿಸಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ವಿರಾಜಪೇಟೆ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.
ರಾಕ್ಷಸಿ ಕೃತ್ಯ... ಮಾಂಸಕ್ಕಾಗಿ ಗರ್ಭ ಧರಿಸಿದ್ದ ಹಸುವಿಗೇ ಗುಂಡಿಟ್ಟ ಪಾಪಿಗಳು! - Pali betta Village panchayat
ಕೊಡಗು ಜಿಲ್ಲೆಯಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಗೋ ಮಾಂಸಕ್ಕಾಗಿ ಗರ್ಭ ಧರಿಸಿದ್ದ ಹಸುವಿಗೆ ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಈ ಅಮಾನವೀಯ ಘಟನೆ ವಿರಾಜಪೇಟೆ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.
ಗೋ
ಪಾಲಿಬೆಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸೂರಿನ ದಯಾನಂದ್ ಎಂಬುವರಿಗೆ ಸೇರಿದ ಹಸು ಇದಾಗಿದ್ದು, ಮೇಯಲು ಬಿಟ್ಟ ಸಂದರ್ಭದಲ್ಲಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.
ಹಸುವನ್ನು ಕೊಂದು, ಮಾಂಸವನ್ನು ಕೊಂಡೊಯ್ಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಯೂಸೂಫ್ ಎಂಬಾತನನ್ನು ಬಂಧಿಸಿrಉವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗ್ತಿದೆ.