ಕರ್ನಾಟಕ

karnataka

ETV Bharat / state

ಪ್ರವಾಹ ಪರಿಸ್ಥಿತಿ ನಿಯಂತ್ರಿಸಲು ಜಂಟಿ ತರಬೇತಿ ಕಾರ್ಯಾಗಾರ: ಕೊಡಗು ಎಸ್​​​​ಪಿ ಸುಮನ್​​

ಮುಂಗಾರು ಆರಂಭವಾಗುತ್ತಿರುವ ಬೆನ್ನಲ್ಲೆ ಪ್ರವಾಹದಂತಹ ಪರಿಸ್ಥಿತಿ ಎದುರಿಸಲು ಮಡಿಕೇರಿಯಲ್ಲಿ ಎನ್​ಡಿಆರ್​​​ಎಫ್ ತಂಡ ಹಾಗೂ ಪೊಲೀಸ್​ ಇಲಾಖೆ ವತಿಯಿಂದ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು, ಮಳೆ ಆರಂಭಕ್ಕೂ ಮುನ್ನವೆ ಜಿಲ್ಲೆಯಲ್ಲಿ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಎಸ್​​ಪಿ ಸುಮನ್​​ ಡಿ.ಪನ್ನೇಕರ್​ ತಿಳಿಸಿದ್ದಾರೆ.

Joint Training Workshop on Control of Flood Condition: Kodagu SP Suman
ಪ್ರವಾಹ ಪರಿಸ್ಥಿತಿ ನಿಯಂತ್ರಿಸಲು ಜಂಟಿ ತರಬೇತಿ ಕಾರ್ಯಾಗಾರ: ಕೊಡಗು ಎಸ್​​​​ಪಿ ಸುಮನ್​​

By

Published : Jun 8, 2020, 7:40 PM IST

ಮಡಿಕೇರಿ (ಕೊಡಗು): ಪ್ರವಾಹ ಪರಿಸ್ಥಿತಿ ಎದುರಿಸುವ ಉದ್ದೇಶದಿಂದ ಮುನ್ನೆಚ್ಚರಿಕಾ ಕ್ರಮವಾಗಿ ಎನ್‌ಡಿಆರ್‌ಎಫ್ ಹಾಗೂ ಪೊಲೀಸ್ ಇಲಾಖೆಗಳ ಸಹಭಾಗಿತ್ವದಲ್ಲಿ ರಕ್ಷಣಾ ಕಾರ್ಯಚರಣೆಯ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಎಸ್​​ಪಿ ಡಾ.ಸುಮನ್ ಡಿ.ಪೆನ್ನೇಕರ್ ತಿಳಿಸಿದರು.

ಪ್ರವಾಹ ಪರಿಸ್ಥಿತಿ ನಿಯಂತ್ರಿಸಲು ಜಂಟಿ ತರಬೇತಿ ಕಾರ್ಯಾಗಾರ: ಕೊಡಗು ಎಸ್​​​​ಪಿ ಸುಮನ್​​

ನಗರದ ಜಿಲ್ಲಾ ಪೊಲೀಸ್ ಮೈದಾನದ ಬಳಿಯಿರುವ ಪೊಲೀಸ್ ಕ್ಯಾಂಟೀನ್​​ ಕಟ್ಟಡದಲ್ಲಿ‌ ಪ್ರಾಕೃತಿಕ ವಿಕೋಪ ಎದುರಿಸಲು ಆಯೋಜಿಸಿದ್ದ ಜಿಲ್ಲಾ ಪೊಲೀಸ್ ಮತ್ತು ಎನ್‌ಡಿಆರ್‌ಎಫ್ ಜಂಟಿ ರಕ್ಷಣಾ ಕಾರ್ಯಾಚರಣೆಯ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಳೆದ ವರ್ಷದಂತೆ ಈ ಭಾರಿಯೂ ವಿಪತ್ತು ಎದುರಿಸಲು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ. ಮಳೆಗಾಲಕ್ಕೂ ಮೊದಲು ಜಿಲ್ಲಾ ಪೊಲೀಸ್ ಮತ್ತು ಎನ್‌ಡಿಆರ್‌ಎಫ್ ಜಂಟಿ ರಕ್ಷಣಾ ಕಾರ್ಯಾಚರಣೆಯ ತರಬೇತಿ ಕಾರ್ಯಾಗಾರ ನಡೆಸಲಾಗುತ್ತಿದೆ. ನಾಲ್ಕು ದಿನಗಳು ನಡೆಯುವ ಕಾರ್ಯಗಾರದಲ್ಲಿ ಮೌಖಿಕ ಹಾಗೂ ಪ್ರಾತ್ಯಕ್ಷಿಕೆ ನೀಡಲಾಗುವುದು.

ವಿಪತ್ತು ನಿರ್ವಹಣಾ ತಂಡಕ್ಕೆ ಎಲ್ಲೆಲ್ಲಿ ಎಷ್ಟು ಪ್ರಮಾಣದ ಮಳೆ ಆಗುತ್ತಿದೆ. ಹಾಗೆಯೇ ನೀರಿನ ಪ್ರಮಾಣ ಎಷ್ಟಿದೆ ಎನ್ನುವ ಸಮರ್ಪಕ ಮಾಹಿತಿಯನ್ನು ಆಗಾಗ್ಗೆ ಎಲ್ಲಾ ಪೊಲೀಸ್ ಠಾಣೆಗಳಿಗೆ ನೀಡಲಾಗುವುದು. ಇದರಿಂದ ಕ್ಷಿಪ್ರ ರಕ್ಷಣಾ ಕಾರ್ಯಚರಣೆಗೆ ಸಾಧ್ಯವಾಗಲಿದೆ ಎಂದು ತಿಳಿಸಿದರು.

ABOUT THE AUTHOR

...view details