ಕೊಡಗು:ಮಡಿಕೇರಿ ದಸರಾದ ಜನೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬುಧವಾರ ಕೊಡಗಿನ ಜನಪ್ರತಿನಿಧಿಗಳು ಹಾಗೂ ಜಿಲ್ಲಾಧಿಕಾರಿ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಇನ್ನೂ ನಗರದ ಗಾಂಧಿ ಮೈದಾನದಲ್ಲಿ ಸಿದ್ಧವಾಗಿರುವ ಭವ್ಯ ವೇದಿಕೆಯಲ್ಲಿ 9 ದಿನಗಳ ಕಾಲ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ವಿವಿಧ ಕಲಾ ಪ್ರತಿಭೆಗಳು ತಮ್ಮ ಕಲೆಯನ್ನ ಅನಾವರಣಗೊಳಿಸಲಿದ್ದಾರೆ.
ಮಡಿಕೇರಿ ದಸರಾ ಸಮಿತಿ ಹಾಗೂ ಕನ್ನಡ ಮತ್ತು ಸಾಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೂ ಮೊದಲು, ಕಲಾ ಸಂಭ್ರಮ ವೇದಿಕೆಯಲ್ಲಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮ ಆರಂಭಿಸಲಾಯಿತು. ಕಳೆದ ಮೂರು ವರ್ಷಗಳಿಂದ ಜಲಪ್ರಳಯ ಹಾಗೂ ಕೋವಿಡ್ ಮಹಾಮಾರಿಯಿಂದ ಮಂಕ್ಕಾಗಿದ್ದ ದಸರಾಗೆ ಈ ಭಾರಿ ಕಳೆ ಬಂದಿತ್ತು.
ಮಡಿಕೇರಿ ದಸರಾ ಜನೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ಕಳೆದ ಎರಡು ಮೂರು ವರ್ಷಗಳಿಂದ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯದ ಹಿನ್ನೆಲೆ ದಸರಾ ಆಚರಣೆಯೆ ಮಂಕಾಗಿತ್ತು. ಮೂರು ವರ್ಷಗಳ ಬಳಿಕ ಇದೀಗ ದಸರಾವನ್ನ ಅದ್ಧೂರಿಯಾಗಿ ನಡೆಸಲು ದಸರಾ ಸಮಿತಿ ಹಾಗೂ ದಶಮಂಟಪಗಳ ಸಮಿತಿ ತಿರ್ಮಾನಿಸಿದೆ. ಇಂದು ಮಡಿಕೇರಿಯಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆತಿದೆ.
ಇದನ್ನೂ ಓದಿ:ಐತಿಹಾಸಿಕ ಮಂಜಿನ ನಗರಿ ಮಡಿಕೇರಿ ದಸರಾ ಉತ್ಸವಕ್ಕೆ ಅದ್ಧೂರಿ ಚಾಲನೆ
ಮೊದಲ ದಿನವಾದ ಇಂದು ಕುಶಾಲನಗರದ ಕುಂದನ ನಾಟ್ಯಕಲಾ ತಂಡದಿಂದ ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ಖ್ಯಾತಿತ ಚೈತಾಲಿ ಚಿಲಾತ ಅವರಿಂದ ನೃತ್ಯ ವೈಭವ ನೋಡುಗರ ಮನಸೋರೆಗೊಳಿಸಿತು. ಮೊದಲ ದಿನವಾದರಿಂದ ಬೆರಳೆಣಿಕೆಯಷ್ಟು ಮಂದಿ ಕಲಾರಸಿಕರು ಮಾತ್ರ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಉಳಿದಂತೆ ಸಾಕಷ್ಟು ಆಸನಗಳು ಖಾಲಿ ಖಾಲಿ ಇದ್ದವು.