ಕರ್ನಾಟಕ

karnataka

ETV Bharat / state

ಮತ್ತೆ ಮರುಕಳಿಸಿದ ಕರಾಳ ನೆನಪು...  ಕೊಡಗಿನಲ್ಲಿ ಎರಡು ಬಡಾವಣೆಗಳು ಜಲಾವೃತ‌..! - Coorg

ಕೊಡಗಿನ ಸೋಮವಾರಪೇಟೆ ತಾಲೂಕಿನ ಕುಶಾಲನಗರ ಪಟ್ಟಣದ ಕುವೆಂಪು  ಬಡಾವಣೆ ಹಾಗೂ ಸಾಯಿ ಬಡಾವಣೆಗಳು ಧಾರಾಕಾರ ಮಳೆಯಿಂದಾಗಿ ಜಲಾವೃತವಾಗಿದೆ.

ಜಲಾವೃತ‌ಗೊಂಡ ಬಡಾವಣೆಗಳು

By

Published : Aug 8, 2019, 9:03 PM IST

ಕೊಡಗು:ಕೊಡಗಿನಲ್ಲಿ‌ ಸುರಿಯುತ್ತಿರುವ ಧಾರಾಕಾರ ಮಳೆಗೆ ಸೋಮವಾರಪೇಟೆ ತಾಲೂಕಿನ ಕುಶಾಲನಗರ ಪಟ್ಟಣದ ಕುವೆಂಪು ಬಡಾವಣೆ ಹಾಗೂ ಸಾಯಿ ಬಡಾವಣೆಗಳು ಸಂಪೂರ್ಣ ಜಲಾವೃತವಾಗಿವೆ.‌

ಜಲಾವೃತ‌ಗೊಂಡ ಬಡಾವಣೆಗಳು

ಅಪಾಯಕ್ಕೆ ಸಿಲುಕಿದ್ದವರನ್ನು ರಾಫ್ಟಿಂಗ್ ಮತ್ತು ಬೋಟ್ ಮೂಲಕ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ ಡಿ.ಪನ್ನೇಕರ್ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿರಾಜಪೇಟೆ ತಾಲೂಕಿನ ಬಿರುನಾಣಿಯ ಬೊಟ್ಟಲಬಾಣೆಯ ಸುಜನ್ ಎಂಬವರ ಕಾಫಿ ತೋಟದಲ್ಲಿ ಮಣ್ಣು ಕುಸಿದು ಅಪಾರ ಪ್ರಮಾಣದ ಕಾಫಿ ಗಿಡಗಳು ಹಾನಿಗೊಳಗಾಗಿವೆ.

ABOUT THE AUTHOR

...view details