ಕೊಡಗು: ಮಂಜಿನನಗರಿ ಮಡಿಕೇರಿಯಲ್ಲಿ ಮಳೆಗಾಲಕ್ಕೂ ಮೊದಲೇ ಮಳೆಯಾಗುತ್ತಿದೆ. ಬಿಸಿಲಿನ ತಾಪಕ್ಕೆ ಬಳಲಿದ್ದ ಜನರಿಗೆ ಮಳೆರಾಯ ತಂಪುನೀಡಿದ್ದಾನೆ.
ಮಳೆಗಾಲಕ್ಕೂ ಮೊದಲೇ ಮಡಿಕೇರಿಯಲ್ಲಿ ಅಕಾಲಿಕ ಮಳೆ
ಮಡಿಕೇರಿಯಲ್ಲಿ ಮೇನಲ್ಲಿಯೇ ಮಳೆ ಆರಂಭವಾಗಿದ್ದು, ಕಾಫಿ ಬೆಳೆಗಾರರು ಅಕಾಲಿಕ ಮಳೆಯಿಂದಾಗಿ ಕಾಫಿ ಹೂ ಉದುರುವ ಆತಂಕದಲ್ಲಿದ್ದಾರೆ.
ಅಕಾಲಿಕ ಮಳೆ
ಮಧ್ಯಾಹ್ನದಿಂದ ಮಳೆ ಆರಂಭವಾಗಿದ್ದು ಅಕಾಲಿಕ ಮಳೆಯಿಂದ ರೈತರು ಕಂಗಾಲಗಿದ್ದಾರೆ. ಈ ತಿಂಗಳಲ್ಲಿ ಕಾಫಿ ಹೂ ಬಿಟ್ಟಿದೆ, ಈ ಅಕಾಲಿಕೆ ಮಳೆ ಬಿದ್ರೆ ಕಾಫಿ ಹೂ ಉದುರುತ್ತದೆ. ಇದರಿಂದ ಮುಂದಿನ ಬೆಳೆಗೆ ಹಾನಿಯಾಗಲಿದೆ ಎಂದು ರೈತರು ಆತಂಕದಲ್ಲಿದ್ದಾರೆ. ಮಳೆಗಾಲಕ್ಕೂ ಮೊದಲೆ ಮಳೆ ಆರಂಭವಾಗಿದ್ದು, ಭತ್ತ ಕೃಷಿ ಮಾಡಲು ಮಾತ್ರ ಅನುಕೂಲವಾಗಿದೆ. ಮತ್ತೊಂದೆಡೆ ಕೊರೊನಾ ಕರ್ಫ್ಯೂ ಇದ್ರೂ ಆಚೆ ಬರ್ತಿದ್ದ ಜನರೀಗ ಮಳೆರಾಯನಿಗೆ ಹೆದರಿ ಮನೆಯೊಳಗಿದ್ದಾರೆ.
Last Updated : May 1, 2021, 9:37 PM IST