ಮಡಿಕೇರಿ:ಇಲ್ಲಿನ ಚೌಟಿ ಮಾರಿಯಮ್ಮ ದೇವಾಲಯದಲ್ಲಿ ದೈವದ ಕೋಲ ಉತ್ಸವ ಅದ್ಧೂರಿಯಾಗಿ ನಡೆದಿದೆ. ಅಪರೂಪದ ಆಚರಣೆಯನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದು ಬಂದಿತ್ತು.
ಮಡಿಕೇರಿಯ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದಲ್ಲಿ ಪ್ರತಿ ಮೂರು ವರ್ಷಕೊಮ್ಮೆ ಸಂಭ್ರಮದ ದೈವಗಳ ಕೋಲ ನಡೆಯುತ್ತದೆ. ಕೋವಿಡ್ ಹಿನ್ನೆಲೆಯಲ್ಲಿ ಈ ಆಚರಣೆ ಕೇವಲ ಹರಕೆ ಒಪ್ಪಿಸುವುದಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ, ಈ ಬಾರಿ ಅದ್ಧೂರಿಯಾಗಿ ದೈವ ಕೋಲ ನಡೆಯಿತು. ರಾತ್ರಿಯಿಡಿ ನಡೆದ ಈ ಕೋಲಕ್ಕೆ ಸಾವಿರಾರರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿದ್ದರು.
ಪ್ರಮುಖವಾಗಿ ವಿಷ್ಣುಮೂರ್ತಿ ಕೋಲ, ಫಾಷಣಮೂರ್ತಿ,ರಕ್ತೇಶ್ವರಿ,ಗುಳಿಗನ ಕೋಲ, ಅಪ್ಪಚ್ಚೀರ ಮಂದಣ್ಣ ಸೇರಿದಂತೆ ಹಲವು ಬಗೆಯ ಕೋಲಗಳು ನಡೆದವು. ತೆರೆ ಕಟ್ಟಿದವರ ವೇಷಭೂಷಣಗಳು, ನೃತ್ಯಗಳು ನೋಡುಗರ ರೋಮಾಂಚನಗೊಳಸಿವಂತಿತ್ತು. ಇನ್ನೂ ವಿಷ್ಣುಮೂರ್ತಿಯು ಬೆಂಕಿಗೆ ಬೀಳುವ ದೃಶ್ಯವನ್ನು ನೋಡುವುದಕ್ಕಾಗಿಯೇ ಹೆಚ್ಚಿನ ಭಕ್ತಾದಿಗಳು ಕಾದು ಕುಳಿತ್ತಿದ್ದರು.