ಕರ್ನಾಟಕ

karnataka

ETV Bharat / state

ಅಮ್ಮನ ನೆನಪು ಮೊಬೈಲ್​​​​​ನ​​​ಲ್ಲಿದೆ ದಯವಿಟ್ಟು ಹುಡುಕಿಕೊಡಿ.. ಜಿಲ್ಲಾಧಿಕಾರಿಗೆ ಪತ್ರ ಬರೆದ ಪುತ್ರಿ

ಕೋವಿಡ್​​ನಿಂದ ಮೃತಪಟ್ಟ ತಾಯಿಯ ಮೊಬೈಲ್ ಹುಡುಕಿಕೊಡಿ ಎಂದು ಮಗಳು ಪತ್ರ ಬರೆದಿದ್ದು, ಜೊತೆಗೆ ಪತಿ ಸಹ ವಿಡಿಯೋ ಮೂಲಕ ಮೊಬೈಲ್ ಹುಡುಕಿಕೊಡುವಂತೆ ಸಂಬಂಧಿಸಿದ ಅಧಿಕಾರಿಗಳಲ್ಲಿ ಕೋರಿದ್ದಾರೆ.

ಜಿಲ್ಲಾಧಿಕಾರಿಗೆ ಪತ್ರ ಬರೆದ ಪುತ್ರಿ
ಜಿಲ್ಲಾಧಿಕಾರಿಗೆ ಪತ್ರ ಬರೆದ ಪುತ್ರಿ

By

Published : May 23, 2021, 5:08 PM IST

ಮಡಿಕೇರಿ (ಕೊಡಗು): ಕೋವಿಡ್​​ನಿಂದಾಗಿ ಮೃತಪಟ್ಟ ತಾಯಿಯೊಬ್ಬರ ಪುತ್ರಿ ಈಗ ನಮ್ಮ ತಾಯಿಯ ಮೊಬೈಲ್ ಹುಡುಕಿಕೊಡಿ ಎಂದು ಜಿಲ್ಲಾಧಿಕಾರಿ, ಪೊಲೀಸರು ಹಾಗೂ ಶಾಸಕರಿಗೆ ಪತ್ರ ಬರೆದಿದ್ದಾಳೆ. ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಗುಮ್ಮನ‌ಕೊಲ್ಲಿ ಗ್ರಾಮದ ನವೀನ್ ಕುಮಾರ್ ಎಂಬಾತನ ಪುತ್ರಿ ಹೃತಿಕ್ಷಾ ಪತ್ರ ಬರೆದು ಮನವಿ ಮಾಡಿದ್ದಾಳೆ.

ನನ್ನ ಅಮ್ಮನ ನೆನಪು ಆ ಮೊಬೈಲ್​ನಲ್ಲಿದೆ. ಆದರೆ ಆಸ್ಪತ್ರೆಯಲ್ಲಿ ಕಳೆದಿದೆ ಅದನ್ನು ಹುಡುಕಿ ಕೊಡಿ ಎಂದಿದ್ದಾಳೆ.

ವಿಡಿಯೋ ಮೂಲಕ ಮೊಬೈಲ್ ಹುಡುಕಿಕೊಡುವಂತೆ ಮನವಿ

ಪತ್ರದಲ್ಲಿ ಏನಿದೆ..?

15 ದಿನಗಳ ಹಿಂದೆ ನಮ್ಮ ಅಮ್ಮ-ಅಪ್ಪ ನಾನು ಕೋವಿಡ್​ಗೆ ತುತ್ತಾಗಿದ್ದು, ಅಮ್ಮನಿಗೆ ರೋಗ ಹೆಚ್ಚಾಗಿದ್ದ ಕಾರಣ ಮಡಿಕೇರಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾನು ಮತ್ತು ಅಪ್ಪ ಮನೆಯಲ್ಲಿ ಕ್ವಾರಂಟೈನ್ ಆಗಿದ್ದೆವು. ಅಪ್ಪ ದಿನಗೂಲಿ ನೌಕರಾಗಿದ್ದು ಅಕ್ಕ ಪಕ್ಕದವರ ಸಹಾಯದಿಂದ ಜೀವನ ಮಾಡಿದೆವು. ಮೇ16ರಂದು ಅಮ್ಮ ಮೃತರಾದರು. ಅವರ ಜೊತೆಯಲ್ಲಿ ಇದ್ದ ಮೊಬೈಲ್ ಅನ್ನು ಯಾರೋ ತೆಗೆದುಕೊಂಡಿದ್ದಾರೆ. ನಾನು ತಬ್ಬಲಿಯಾಗಿದ್ದು ನನ್ನ ತಾಯಿಯ ನೆನಪುಗಳು ಅ ಮೊಬೈಲ್​ನಲ್ಲಿದೆ, ಆದ್ದರಿಂದ ಯಾರಾದ್ರು ತೆಗೆದುಕೊಂಡಿದ್ರೆ ಅಥವಾ ಸಿಕ್ಕಿದ್ರೆ ಈ ತಬ್ಬಲಿಗೆ ತಲುಪಿಸಿ ಎಂದು ಪತ್ರ ಬರೆದಿದೆ.

ಜಿಲ್ಲಾಧಿಕಾರಿಗೆ ಪತ್ರ ಬರೆದ ಪುತ್ರಿ

ಸದ್ಯ ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಪತ್ರಕ್ಕೆ ಜಿಲ್ಲಾಡಳಿತ ಪ್ರತಿಕ್ರಿಯಿಸಿ ಆದಷ್ಟು ಬೇಗ ಆಕೆಯ ಮಹಿಳೆಯ ಮೊಬೈಲ್ ಹುಡುಕಿಕೊಡುವ ಭರವಸೆ ನೀಡಿದ್ದಾರೆ.

ABOUT THE AUTHOR

...view details