ಕೊಡಗು : ಸಿಮೆಂಟ್ ಹೊದಿಕೆಯಿಂದ ಹೊರ ಬಂದಿರುವ ಕಬ್ಬಿಣದ ಸರಳುಗಳು, ಟ್ಯಾಂಕ್‌ನಿಂದ ಜಿನುಗುತ್ತಿರುವ ನೀರು, ನೆತ್ತಿ ಮೇಲೆ ಯಮನಂತೆ ಅಸ್ತಿತ್ವವಿಲ್ಲದೇ ನಿಂತಿರುವ ಸಾವಿರ ಲೀಟರ್ ನೀರು ಸಾಮರ್ಥ್ಯದ ಬೃಹತ್ ಗಾತ್ರದ ಟ್ಯಾಂಕ್. ಇವೆಲ್ಲವೂ ಕಂಡುಬಂದಿದ್ದು, ನಗರದ ಹೃದಯ ಭಾಗದಲ್ಲಿರುವ ಮಡಿಕೇರಿಯ ಕೋಟೆ ಆವರಣದಲ್ಲಿ.
ಬ್ರಿಟಿಷರ ಕಾಲದಲ್ಲಿ ನಿರ್ಮಿಸಿರುವ ಈ ವಾಟರ್ ಟ್ಯಾಂಕ್ ಆಯಸ್ಸು ಕಳೆದುಕೊಂಡಿದೆ. ಈ ಟ್ಯಾಂಕ್‌ನಿಂದಲೇ ನಿತ್ಯ ಮಡಿಕೇರಿಯ ಹಲವು ಬಡಾವಣೆಗಳಿಗೆ ಕುಡಿವ ನೀರನ್ನು ಪೂರೈಸಲಾಗುತ್ತಿದೆ. ಆದರೆ, ನಿರ್ಮಾಣ ಮಾಡಿ ಸಾಕಷ್ಟು ವರ್ಷಗಳೇ ಕಳೆದಿರುವ ಹಿನ್ನೆಲೆಯಲ್ಲಿ ಸೂಕ್ತ ನಿರ್ವಹಣೆ ಕೊರತೆಯಿಂದ ಅದು ಬೀಳುವ ಹಂತ ತಲುಪಿದೆ. ಇಷ್ಟೆಲ್ಲ ಆದರೂ ಈ ಟ್ಯಾಂಕ್ ದುರಸ್ತಿ ಮಾಡುವುದಾಗಲಿ ಅಥವಾ ತೆರವು ಗೊಳಿಸುವುದಕ್ಕಾಗಲಿ ಸಾಧ್ಯವಿಲ್ಲದಂತಾಗಿದೆ.