ಕೊಡಗು :ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಕೊಡಗು-ಕೇರಳ ಅಂತರ್ ರಾಜ್ಯ ಹೆದ್ದಾರಿ ಬಂದ್ ಮಾಡಿದ್ದರೂ ಅದನ್ನು ಉಲ್ಲಂಘಿಸಿದ ಇಬ್ಬರನ್ನೂ ವಶಕ್ಕೆ ಪಡೆದು ಜಿಲ್ಲಾ ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ಕುರುಳಿ ಪರಂಬು ಗ್ರಾಮದ ನಿವಾಸಿ 31ವರ್ಷದ ಜಕ್ರೀಯ ಹಾಗೂ ಕೆ ಎ ಉಸ್ಮಾನ್ ಈ ಇಬ್ಬರನ್ನೂ ವಶಕ್ಕೆ ಪಡೆದು ಐಪಿಸಿ ಸೆಕ್ಷನ್ 188, 269 ಮತ್ತು 51(b) ಅಡಿ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಂತರ್ರಾಜ್ಯ ಗಡಿ ದಾಟಿದ ಇಬ್ಬರಿಗೆ ಕೊಡಗು ಜಿಲ್ಲಾ ಕ್ವಾರಂಟೈನ್‌ನಲ್ಲಿ ನಿಗಾ.. - ಮಡಿಕೇರಿಯಲ್ಲಿ ಇಬ್ಬರಿಗೆ ಕೊರೊನಾ ಸೋಂಕಿನ ಶಂಕೆ
ಕರಿಕೆ ಚೆಕ್‌ಪೋಸ್ಟ್‌ವರೆಗೆ ಬೈಕಿನಲ್ಲಿ ಬಂದು ಅಡ್ಡದಾರಿಯಲ್ಲಿ ಎಮ್ಮೆಮಾಡುಗೆ ಬಂದಿದ್ದರು. ಉಸ್ಮಾನ್ ಕೂಡ ಕರಿಕೆಯ ತೋಟಂನಿಂದ ಬಂದಿದ್ದು ಇಬ್ಬರನ್ನೂ ಮುಂಜಾಗ್ರತಾ ದೃಷ್ಟಿಯಿಂದ ಮಡಿಕೇರಿಯ ಜಿಲ್ಲಾ ಕ್ವಾರಂಟೈನ್‌ನಲ್ಲಿರಿಸಲಾಗಿದೆ.
ನೆರೆಯ ಕೇರಳ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಈ ನಡುವೆ ಜಿಲ್ಲಾಡಳಿತದ ಆದೇಶದಂತೆ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಕರಿಕೆ ಚೆಕ್‌ಪೋಸ್ಟ್ ಬಂದ್ ಮಾಡಲಾಗಿತ್ತು. ಹೀಗಿದ್ದರೂ ಇವರು ಆದೇಶ ಉಲ್ಲಂಘಿಸಿ ಕರಿಕೆ ಚೆಕ್‌ಪೋಸ್ಟ್ ಅಡ್ಡ ರಸ್ತೆಯ ಮುಖಾಂತರ ಕೇರಳ ರಾಜ್ಯದ ಪಾಣತ್ತೂರಿನ ಬಳಂದೋಡುವಿನ ಮಸೀದಿಯಲ್ಲಿ ಕೆಲಸ ಮಾಡುತ್ತಿದ್ದರು. ಕರಿಕೆ ಚೆಕ್‌ಪೋಸ್ಟ್‌ವರೆಗೆ ಬೈಕಿನಲ್ಲಿ ಬಂದು ಅಡ್ಡದಾರಿಯಲ್ಲಿ ಎಮ್ಮೆಮಾಡುಗೆ ಬಂದಿದ್ದರು. ಉಸ್ಮಾನ್ ಕೂಡ ಕರಿಕೆಯ ತೋಟಂನಿಂದ ಬಂದಿದ್ದು ಇಬ್ಬರನ್ನೂ ಮುಂಜಾಗ್ರತಾ ದೃಷ್ಟಿಯಿಂದ ಮಡಿಕೇರಿಯ ಜಿಲ್ಲಾ ಕ್ವಾರಂಟೈನ್‌ನಲ್ಲಿರಿಸಲಾಗಿದೆ.