ಕೊಡಗು:ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಸಮೀಪದ ಶಿರಂಗಾಲ ನಿವಾಸಿ ಕೊರೊನಾ ಸೋಂಕಿತನ ಜೊತೆ ಸಂಪರ್ಕದಲ್ಲಿದ್ದವರನ್ನು ಕಂಡು ಹಿಡಿಯುವ ಕೆಲಸ ಜಿಲ್ಲಾಡಳಿತಕ್ಕೆ ಸವಾಲಾಗಿದೆ.
ಸೋಮವಾರಪೇಟೆ ತಾಲೂಕಿನ ಪಿ-9215 ಸಂಖ್ಯೆಯ ಪಾಸಿಟಿವ್ ವ್ಯಕ್ತಿಗೆ (36) ಯಾವುದೇ ಅಂತರ್‌ರಾಜ್ಯ ಪ್ರಯಾಣದ ಇತಿಹಾಸ ಇರುವುದಿಲ್ಲ. ಇವರು ಬೆಂಗಳೂರು ಹಾಗೂ ಗದಗ್‍ಗೆ ತೆರಳಿರುವ ಮಾಹಿತಿ ಇದೆ. ಜೂನ್ 19 ರಂದು ರೋಗಿಯ ಗಂಟಲ ದ್ರವವನ್ನು ಪರೀಕ್ಷಿಸಿ ಮನೆಗೆ ಕಳುಹಿಸಲಾಗಿತ್ತು. ನಿನ್ನೆ ರಾತ್ರಿ 11 ಗಂಟೆಗೆ ಸೋಂಕು ದೃಢವಾದ ವರದಿ ಬಂದಿದ್ದು, ತಕ್ಷಣ ಇವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಂಕಿತ ವ್ಯಾಪಾರಿಯ ಮಾಹಿತಿ ನೀಡಿದ ಕೊಡಗು ಜಿಲ್ಲಾಧಿಕಾರಿ ಅನೀಸ್ ಕೆ.ಜಾಯ್ ಶನಿವಾರಸಂತೆ ಹೋಬಳಿಯ ಗ್ರಾಮವೊಂದರ ನಿವಾಸಿಯಾಗಿರುವ ಇವರು ಜೂನ್ 10 ರಂದು ಬೆಂಗಳೂರಿನಿಂದ ಹುಣಸೂರಿಗೆ ಹೋಗಿ, ಜೂನ್ 15 ರಂದು ಸೋಮವಾರಪೇಟೆಗೆ ವಾಪಸ್ಸಾಗಿದ್ದಾರೆ. ಬಳಿಕ ಸ್ಥಳೀಯವಾಗಿ ಅಲ್ಲಿಯೇ ಸುತ್ತಾಡಿದ್ದಾರೆ. ಜೂನ್ 16 ರಂದು ಮತ್ತೆ ಗದಗ್‍ಗೆ ಹೋಗಿದ್ದು 19 ರಂದು ಶನಿವಾರಸಂತೆಗೆ ಬಂದಿದ್ದರು. ಈ ವೇಳೆ ಆಶಾ ಕಾರ್ಯಕರ್ತೆ ಅವರ ಟ್ರಾವೆಲ್ ಹಿಸ್ಟರಿ ಆಧಾರದ ಮೇಲೆ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಪಾಸಿಟಿವ್ ಎಂದು ಗೊತ್ತಾಗಿತ್ತು.
ಇದಕ್ಕೂ ಮೊದಲು ಇವರು ಹೋಬಳಿಯ ಖಾಸಗಿ ಕ್ಲಿನಿಕ್ ಒಂದರಲ್ಲಿ ಚಿಕಿತ್ಸೆ ಪಡೆದಿದ್ದರು. ಅಲ್ಲದೇ ಸಂಬಂಧಿಕರು ಸೇರಿದಂತೆ ಕಾರನ್ನು ಸರ್ವೀಸ್ ಮಾಡಿಸಲೂ ಹೋಗಿದ್ದಾರೆ. ಬೆಳಗ್ಗೆ ಸೋಮವಾರಪೇಟೆ ಮಾರುಕಟ್ಟೆಯಲ್ಲಿ ತರಕಾರಿ ಮತ್ತು ಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದು, ಈ ವೇಳೆ ಆರೋಗ್ಯ ಸಿಬ್ಬಂದಿ ದೂರವಾಣಿಯಲ್ಲಿ ಪಾಸಿಟಿವ್ ಇರುವುದನ್ನು ತಿಳಿಸಿದಾಗ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಅನೀಸ್ ಕೆ. ಜಾಯ್ ತಿಳಿಸಿದರು.
ಸೋಂಕಿತ ವ್ಯಾಪಾರಿಯ ಪ್ರಯಾಣದ ಇತಿಹಾಸ