ಕರ್ನಾಟಕ

karnataka

ETV Bharat / state

ಸೋಂಕಿತ ವ್ಯಾಪಾರಿಯ ಇಬ್ಬರು ಮಕ್ಕಳಿಗೂ ಕೊರೊನಾ ದೃಢ: ಕೊಡಗು ಡಿಸಿ

ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಹೋಬಳಿ ಸಮೀಪದ ನಿವಾಸಿಯ ಹೆಣ್ಣುಮಗಳು ಮತ್ತು ಮಗನಿಗೆ ಪಾಸಿಟಿವ್ ದೃಢಪಟ್ಟಿದೆ.

Kodagu
ಅನೀಸ್ ಕೆ.ಜಾಯ್

By

Published : Jun 24, 2020, 3:32 PM IST

ಕೊಡಗು: ಕೊರೊನಾ ಸೋಂಕಿತನ ಇಬ್ಬರು ಮಕ್ಕಳಲ್ಲಿ ಇಂದು ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕೆ.ಜಾಯ್ ತಿಳಿಸಿದ್ದಾರೆ.

ನಿನ್ನೆಯಷ್ಟೇ ದಾಖಲಾಗಿದ್ದ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಹೋಬಳಿಯ ಸಮೀಪದ ನಿವಾಸಿಯ ಮಕ್ಕಳಾದ ಪಿಯುಸಿ ಓದುತ್ತಿರುವ ಬಾಲಕಿ (17) ಹಾಗೂ ಬಾಲಕ(14)ನಿಗೆ ಪಾಸಿಟಿವ್ ದೃಢಪಟ್ಟಿದೆ. ಇವರ ಟ್ರಾವೆಲ್ ಹಿಸ್ಟರಿಯಲ್ಲಿ ಅಷ್ಟೇನು ವ್ಯತ್ಯಾಸಗಳಿಲ್ಲ. ಆದರೆ, ಬಾಲಕ‌ ಶನಿವಾರ ಸಂತೆಯ ಗುಂಡೂರಾವ್ ಬಡಾವಣೆಯಲ್ಲಿ ಉಳಿದುಕೊಂಡು ಕೆಲವು ಮಕ್ಕಳೊಂದಿಗೆ ಆಟವಾಡಿದ್ದಾನೆ. ಈಗಾಗಲೇ ಹುಡುಗನ ಜೊತೆಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಮಕ್ಕಳನ್ನು‌ ಗುರುತಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ದಾಖಲಾಗಿರುವ ಒಟ್ಟು 8 ಕೊರೊನಾ ಪ್ರಕರಣಗಳಲ್ಲಿ 5 ಸಕ್ರಿಯವಾಗಿವೆ. ಸೀಲ್‌ಡೌನ್ ಮಾಡಿರುವ ಪ್ರದೇಶಗಳ ಇಬ್ಬರು ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಎಸ್​​ಎಸ್​​​ಎಲ್​​ಸಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು.‌

ABOUT THE AUTHOR

...view details