ಕರ್ನಾಟಕ

karnataka

ETV Bharat / state

ಪಿರಿಯಾಪಟ್ಟಣ, ಹುಣಸೂರಿನ 13 ಕಾರ್ಮಿಕರು ಕೊಡಗಿನಲ್ಲಿ ಕ್ವಾರಂಟೈನ್​​!

ದೇಶದೆಲ್ಲೆಡೆ ಲಾಕ್​ಡೌನ್​ನಲ್ಲಿ ಸಿಲುಕಿದ್ದವರ ಕರೆತರಲು ನಿಯಮವನ್ನು ಸಡಿಲಿಕೆ ಮಾಡಲಾಗಿದೆ. ಈ ನಡುವೆ ತಾಲೂಕಿನ ಇರ್ಪು ಜಲಪಾತ ರಸ್ತೆ ನಿರ್ಮಾಣ ಕಾಮಗಾರಿಗೆ ಪಿರಿಯಾಪಟ್ಟಣ ಹಾಗೂ ಹುಣಸೂರು ಭಾಗಗಳಿಂದ ಬಂದ ಕಾರ್ಮಿಕರನ್ನು ಕ್ವಾರಂಟೈನ್ ಮಾಡಲಾಗಿದೆ. ಪಟ್ಟಣದ ಬಿಸಿಎಂ ವಸತಿ ನಿಲಯದಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ ಎಂದು ತಹಶೀಲ್ದಾರ್ ನಂದೀಶ್ ತಿಳಿಸಿದ್ದಾರೆ.

13 workers from Periyapatna and hunasuru quarantined in Kodagu
ಪಿರಿಯಾಪಟ್ಟಣ, ಹುಣಸೂರಿನ 13 ಕಾರ್ಮಿಕರು ಕೊಡಗಿನಲ್ಲಿ ಕ್ವಾರಂಟೈನ್‌..!

By

Published : Apr 30, 2020, 10:32 PM IST

ಕೊಡಗು (ವಿರಾಜಪೇಟೆ): ತಾಲೂಕಿನ ಇರ್ಪು ಜಲಪಾತ ರಸ್ತೆ ನಿರ್ಮಾಣ ಕಾಮಗಾರಿಗೆ ಪಿರಿಯಾಪಟ್ಟಣ ಹಾಗೂ ಹುಣಸೂರು ಭಾಗಗಳಿಂದ ಬಂದ ಕಾರ್ಮಿಕರನ್ನು ಕ್ವಾರಂಟೈನ್ ಮಾಡಲಾಗಿದೆ.

13 ಮಂದಿ ಕಾರ್ಮಿಕರನ್ನು ಮುಂಜಾಗ್ರತಾ ಕ್ರಮವಾಗಿ ಪಟ್ಟಣದ ಬಿಸಿಎಂ ವಸತಿ ನಿಲಯದಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ ಎಂದು ತಹಶೀಲ್ದಾರ್ ನಂದೀಶ್ ತಿಳಿಸಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕು ಬಾಧಿಸುತ್ತಿರುವುದರಿಂದ ತಾಲೂಕಿನ ಇರ್ಪು ಜಲಪಾತ ರಸ್ತೆ ನಿರ್ಮಾಣ ಕಾಮಗಾರಿಗೆ ಪಿರಿಯಾಪಟ್ಟಣ ಹಾಗೂ ಹುಣಸೂರು ಭಾಗಗಳಿಂದ ಬಂದ ಕಾರ್ಮಿಕರನ್ನು ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಕ್ವಾರಂಟೈನ್‌ಗೆ ಕಳುಹಿಸಲಾಗಿದೆ.

ಪ್ರಾರಂಭದಲ್ಲಿ ಇರ್ಪು ರಾಮೇಶ್ವರ ದೇವಾಲಯದ ವಸತಿ ನಿಲಯದಲ್ಲಿ ಕಾರ್ಮಿಕರನ್ನು ಗೃಹ ಬಂಧನದಲ್ಲಿ ಇಡಲಾಗಿತ್ತು. ಆಹಾರ ಪೊರೈಕೆ, ಆರೋಗ್ಯ ತಪಾಸಣೆ ಸೇರಿದಂತೆ ಇತರ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ವಸತಿ ನಿಲಯದಲ್ಲಿ ಅವರನ್ನು ಕ್ವಾರಂಟೈನ್ ಮಾಡಲಾಗಿದೆ.‌

ABOUT THE AUTHOR

...view details