ಕರ್ನಾಟಕ

karnataka

ETV Bharat / state

ಯುವತಿಯೊಂದಿಗೆ ಪ್ರೇಮಕ್ಕೆ ವಿರೋಧ: ವಿಷ ಕುಡಿಸಿ, ಕುತ್ತಿಗೆ ಬಿಗಿದು ಯುವಕನ ಕೊಲೆ - ಕಲಬುರಗಿ ಯುವಕನ ಕೊಲೆ ಪ್ರಕರಣ

ಕಾಲೇಜು ವಿದ್ಯಾರ್ಥಿನಿಯೋರ್ವಳನ್ನು ಪ್ರೀತಿಸಿದ್ದ ಯುವಕನನ್ನು ಆಕೆಯ ಮನೆಯವರೇ ಕೊಲೆಗೈದಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.

youth-murdered-over-love-with-college-girl-in-kalaburagi
ಕಲಬುರಗಿ ಯುವಕನ ಕೊಲೆ

By

Published : Jul 6, 2022, 10:02 AM IST

Updated : Jul 6, 2022, 12:16 PM IST

ಕಲಬುರಗಿ:ಯುವತಿಯೊಂದಿಗಿನ ಪ್ರೇಮ ವಿಚಾರಕ್ಕೆ ಲಾಡ್ಜ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕ ಆಕೆಯ ಮನೆಯವರಿಂದಲೇ ಕೊಲೆಗೀಡಾದ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ದೇವಲ ಗಾಣಗಾಪುರದಲ್ಲಿ ನಡೆದಿದೆ. ಚಂದ್ರಕಾಂತ್​​ ಪೂಜಾರಿ (24) ಎಂಬಾತ ದುರಂತ ಅಂತ್ಯ ಕಂಡ ಯುವಕನಾಗಿದ್ದಾನೆ.

ಚಂದ್ರಕಾಂತ್ ದೇವಲ ಗಾಣಗಾಪುರದ ಲಾಡ್ಜ್‌ವೊಂದರಲ್ಲಿ ಕೆಲಸ ಮಾಡುತ್ತ ತನ್ನ ತಾಯಿಯೊಂದಿಗೆ ಜೀವನ ಸಾಗಿಸುತ್ತಿದ್ದ. ಹೀಗಿರುವಾಗ ಈತನಿಗೆ ಪಕ್ಕದ ಜೇವರ್ಗಿ ತಾಲೂಕಿನ ಗ್ರಾಮವೊಂದರ ಕಾಲೇಜು ವಿದ್ಯಾರ್ಥಿನಿಯೋರ್ವಳ ಪರಿಚಯವಾಗಿದ್ದು, ಕ್ರಮೇಣ ಸಲುಗೆ ಬೆಳೆದು ಆರು ತಿಂಗಳಿನಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೀತಿಯ ವಿಚಾರ ಯುವತಿ ಮನೆಯವರಿಗೆ ಗೊತ್ತಾದಾಗ ಗಲಾಟೆ ನಡೆದಿದೆ.

ಆರೋಪಿಗಳು

ಬಳಿಕ ಮನೆಯಲ್ಲೇ ಇದ್ದರೆ ಮದುವೆ ಆಗಲು ಬಿಡುವುದಿಲ್ಲವೆಂದು ಮೂರ್ನಾಲ್ಕು ದಿನಗಳ ಹಿಂದೆ ಇಬ್ಬರೂ ಬೇರೆಡೆ ಓಡಿ ಹೋಗಿದ್ದರು. ಆದರೂ ಹುಡುಕಿ ಕರೆತಂದ ಯುವತಿ ಮನೆಯವರು ಚಂದ್ರಕಾಂತ್​ಗೆ ತಮ್ಮ‌ ಮಗಳ ತಂಟೆಗೆ ಬಾರದಂತೆ ಎಚ್ಚರಿಕೆ ನೀಡಿದ್ದರು. ಇದರಿಂದ ದಿಕ್ಕು ತೋಚದಂತಾದ ಯುವಕ ಬೆಂಗಳೂರಿಗೆ ಹೋಗಿದ್ದ. ಆದರೆ ಚಂದ್ರಕಾಂತನನ್ನು ಬಿಟ್ಟಿರಲಾಗದೆ ಅವನೇ ಬೇಕೆಂದು ಯುವತಿ ಮನೆಯಲ್ಲಿ ಹಠ ಹಿಡಿದಿದ್ದಾಳೆ ಎನ್ನಲಾಗಿದೆ.

ಯುವಕ ನಿನ್ನನ್ನು ಮರೆತು ಊರು ಬಿಟ್ಟು ಹೋಗಿದ್ದಾನೆಂದರೂ ಯುವತಿ ಕೇಳದಿದ್ದಾಗ ಆಕೆಯ ಸಹೋದರರು ಬೆಂಗಳೂರಿನಿಂದ ಚಂದ್ರಕಾಂತ್​ನನ್ನು ಕರೆಸಿದ್ದರು. ಯುವತಿಗೂ ತನಗೂ ಸಂಬಂಧವಿಲ್ಲ ಅಂತ ಆಕೆಯ ಮುಂದೆ ಹೇಳಬೇಕು ಎಂದು ಒತ್ತಾಯಿಸಿದ್ದಾರೆ. ಜೂನ್ 3ರಂದು ಬೆಂಗಳೂರಿನಿಂದ ಬಂದ ಚಂದ್ರಕಾಂತ್ ಯುವತಿಯ ಎದುರು ಸುಳ್ಳು ಹೇಳಲು ನಿರಾಕರಿಸಿದ್ದಾನೆ.


ಇದರಿಂದ ಕೆರಳಿದ ಯುವತಿಯ ಸಹೋದರ ಹಾಗೂ ಇತರ ಇಬ್ಬರು ಚಂದ್ರಕಾಂತ್​ನನ್ನು ಇಂಗಳಗಿ ಗ್ರಾಮದ ಸೀಮಾಂತರದ ಹೊಲವೊಂದಕ್ಕೆ ಕರೆದೊಯ್ದಿದ್ದಾರೆ. ಬಳಿಕ ಒತ್ತಾಯದಿಂದ ವಿಷ ಕುಡಿಸಿ, ಟವೆಲ್​ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಈ ಬಗ್ಗೆ ಅಫಜಲಪುರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಯುವತಿಯ ಸಹೋದರ ಹಾಗೂ ಸಂಬಂಧಿಗಳಾದ ಈರಪ್ಪ, ಹುಲಿಗೆಪ್ಪಾ ಹಾಗೂ ರಾಕೇಶ್ ಎಂಬುವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ನೂಪುರ್ ಶರ್ಮಾ​ 'ಶಿರಚ್ಛೇದಕ್ಕೆ ಸುಪಾರಿ' ನೀಡಿದ್ದ ಅಜ್ಮೇರ್​ ದರ್ಗಾದ ಸಲ್ಮಾನ್​ ಚಿಸ್ತಿ ಬಂಧನ

Last Updated : Jul 6, 2022, 12:16 PM IST

ABOUT THE AUTHOR

...view details