ಕಲಬುರಗಿ:ಮಾಜಿ ಸೈನಿಕ ರಾಮು ಪವಾರ್ ಎಂಬಾತ ಸಂಸದ ಉಮೇಶ ಜಾಧವ ಅವರಿಗೆ ಕ್ಲಾಸ್ ತೆಗೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಖರ್ಗೆ ಇದ್ದಿದ್ರೆ ಒಂದು ಫೋನಲ್ಲೇ ಕೆಲ್ಸ ಆಗ್ತಿತ್ತು, ಉದ್ಯೋಗ ಕಳೆದುಕೊಂಡ ನಿವೃತ್ತ ಯೋಧನಿಂದ ಜಾಧವ್ಗೆ ಕ್ಲಾಸ್: ವಿಡಿಯೋ ವೈರಲ್ - ಹತ್ತಾರು ಸೈನಿಕರ ಕುಟುಂಬಗಳು ಬೀದಿಗೆ
ನಿವೃತ್ತ ಸೈನಿಕನೋರ್ವ ಸಂಸದ ಉಮೇಶ ಜಾಧವ ಅವರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದಕೊಂಡ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ರಾಮು ಪವಾರ್ ನಿವೃತ್ತಿಯಾದ ಬಳಿಕ ಕಲಬುರಗಿಯ ಇಎಸ್ಐ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಇಎಸ್ಐ ಆಸ್ಪತ್ರೆಯವರು ಕೆಲ ನಿವೃತ್ತ ಸೈನಿಕರನ್ನು ಕೆಲಸದಿಂದ ತೆಗೆದುಹಾಕಿದ್ದು, ಹತ್ತಾರು ಯೋಧರ ಕುಟುಂಬಗಳು ಬೀದಿಗೆ ಬಿದ್ದಿವೆ. ಇದರಿಂದ ಕುಪಿತಗೊಂಡಿರುವ ಯೋಧರು ಅನೇಕ ದಿನಗಳಿಂದ ಆಸ್ಪತ್ರೆಯ ಮುಂದೆ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಆದರೆ, ಇಲ್ಲಿಯವರೆಗೆ ಸಂಸದ ಜಾಧವ್ ತಮ್ಮ ಸಮಸ್ಯೆ ಬಗೆ ಹರಿಸಲು ಪ್ರಯತ್ನ ಪಟ್ಟಿಲ್ಲ ಎನ್ನುವದು ಸೈನಿಕನ ಆರೋಪವಾಗಿದೆ.
ನಮ್ಮ ಸಮಾಜದವರು ಎಂದು ಎಲ್ಲಾ ಲಂಬಾಣಿ ಜನಾಂಗದವರು ಓಟ್ ಹಾಕಿ ಗೆಲ್ಲಿಸಿದ್ದೆವು. ಕೆಲಸ ಆಗುತ್ತೆ ಅಂತ ಆತನ ಕಾಲು ಬಿದ್ದೆವು. ಕಲಬುರಗಿಯಲ್ಲೆ ಇದ್ದರು ನಮ್ಮನ್ನು ಭೇಟಿಯಾಗಿ ಸಮಸ್ಯೆ ಇತ್ಯರ್ಥಗೊಳಿಸಲು ಪ್ರಯತ್ನ ನಡೆಸಿಲ್ಲ. ಕೆಲಸ ಹೋದ ನೋವಿನಿಂದ ನನಗೆ ಪಾರ್ಶ್ವವಾಯು ಆಗಿದೆ. ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರು ಸಂಸದರಾಗಿದ್ದಾಗ ಒಂದು ಫೋನಿನಲ್ಲಿ ಕೆಲಸ ಆಗುತ್ತಿತ್ತು. ನಿಮ್ಮನ್ನು ನಂಬಿ ಆರಿಸಿ ತಂದು ಹಾಳಾಗಿದ್ದೇವೆ ಎಂದು ಕ್ಲಾಸ್ ತೆಗೆದುಕೊಂಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.