ಕಲಬುರಗಿ:ಭೀಮಾ ನದಿ ಒಳ ಹರಿವು ಹೆಚ್ಚಾಗಿದ್ದು ಜಿಲ್ಲೆಯ ಅನೇಕ ಗ್ರಾಮಗಳು ಪ್ರವಾಹ ಭೀತಿ ಎದುರಿಸುತ್ತಿವೆ. ಇಂತಹ ಗ್ರಾಮಗಳಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭೇಟಿ ನೀಡುತ್ತಿದ್ದಾರೆ.
ಆತಂಕ ಬೇಡ ನಿಮ್ಮ ಜೊತೆ ನಾವಿದ್ದೇವೆ: ಪ್ರಿಯಾಂಕ್ ಖರ್ಗೆ - flood 2019
ಚಿತ್ತಾಪುರ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಇಂದು ಸನ್ನತಿ ಬ್ರಿಜ್ ಕಂ ಬ್ಯಾರೆಜ್ ಹಾಗೂ ಕಡಬೂರು ಗ್ರಾಮ ಸೇರಿದಂತೆ ವಿವಿಧ ನದಿ ಪಾತ್ರದ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
ಮಾಜಿ ಸಚಿವ, ಚಿತ್ತಾಪುರ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಇಂದು ಸನ್ನತಿ ಬ್ರಿಜ್ ಕಂ ಬ್ಯಾರೆಜ್ ಹಾಗೂ ಕಡಬೂರು ಗ್ರಾಮ ಸೇರಿದಂತೆ ವಿವಿಧ ನದಿ ಪಾತ್ರದ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಬಳಿಕ ಗ್ರಾಮಸ್ಥರೊಂದಿಗೆ ಚರ್ಚಿಸಿ ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ. ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಧೈರ್ಯ ಹೇಳಿದರು.
ಇನ್ನು ನದಿಯ ಹೊರ ಹರಿವಿನ ಮಾಹಿತಿ ಪಡೆದ ಶಾಸಕ ಪ್ರಿಯಾಂಕ್ ಖರ್ಗೆ, ಅಗತ್ಯಕ್ಕೆ ಅನುಗುಣವಾಗಿ ಈಜು ತಜ್ಞರು, ಮುಳುಗು ತಜ್ಞರು, ಬೋಟ್ ಹಾಗೂ ಎನ್ ಡಿಆರ್ ಎಫ್ ಸಿಬ್ಬಂದಿ ನಿಯೋಜನೆ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.