ಕಲಬುರಗಿ :ಹಿರಿಯ ಹೋರಾಟಗಾರ, ಮಾಜಿ ಸಚಿವ ವೈಜನಾಥ ಪಾಟೀಲ್ ಅವರ ಅಂತ್ಯಸಂಸ್ಕಾರ ವೀರಶೈವ ಲಿಂಗಾಯತದ ವಿಧಿ ವಿಧಾನದ ಪ್ರಕಾರ ಸರ್ಕಾರಿ ಗೌರವದೊಂದಿಗೆ ಚಿಂಚೋಳಿಯಲ್ಲಿ ನೆರವೇರಿತು.
ವೀರಶೈವ ಲಿಂಗಾಯತ ಸಂಪ್ರದಾಯದಂತೆ ನೆರವೇರಿದ ವೈಜನಾಥ ಪಾಟೀಲರ ಅಂತ್ಯಸಂಸ್ಕಾರ
ಹಿರಿಯ ಹೋರಾಟಗಾರ, ಮಾಜಿ ಸಚಿವ ವೈಜನಾಥ ಪಾಟೀಲ್ ಅವರ ಅಂತ್ಯಸಂಸ್ಕಾರ ವೀರಶೈವ ಲಿಂಗಾಯತದ ವಿಧಿವಿಧಾನದ ಪ್ರಕಾರ ಸರ್ಕಾರಿ ಗೌರವದೊಂದಿಗೆ ಚಿಂಚೋಳಿಯಲ್ಲಿ ನೆರವೇರಿತು.
ವೈಜನಾಥ ಪಾಟೀಲ ಅವರ ಪಾರ್ಥಿವ ಶರೀರವನ್ನು ಚಿಂಚೋಳಿ ಪಟ್ಟಣದ ನಿವಾಸದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಚಿಂಚೋಳಿಯ ಗಂಗಾಂಬಿಕಾ ಕಲ್ಯಾಣ ಮಂಟಪದ ಆವರಣದಲ್ಲಿರುವ ಅವರ ತೋಟದಲ್ಲಿ ಅಂತ್ಯಸಂಸ್ಕಾರ ನೆರವೇರಿತು. ಈ ವೇಳೆ, ಪೊಲೀಸ್ ಸಿಬ್ಬಂದಿ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ವಿಶೇಷ ಗೌರವ ಸಲ್ಲಿಸಿದರು.
ವೀರಶೈವ ಲಿಂಗಾಯತದ ವಿಧಿವಿಧಾನ ಪ್ರಕಾರ ನಡೆದ ಅಂತ್ಯಕ್ರಿಯೆಲ್ಲಿ ಮೂರು ಸಾವಿರಕ್ಕೂ ಹೆಚ್ಚು ವಿಭೂತಿ, ಬಿಲ್ವಪತ್ರೆ ಹಾಗು ಉಪ್ಪು ಬಳಸಲಾಯಿತು. ಈ ವೇಳೆ ಸಚಿವ ಪ್ರಭು ಚವ್ಹಾಣ, ರಾಜಕೀಯ ಗಣ್ಯರು, ವಿವಿಧ ಮಠಗಳ ಸ್ವಾಮೀಜಿಗಳು, ಅಭಿಮಾನಿಗಳು ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು.