ಕಲಬುರಗಿ :ಸ್ಪೃಶ್ಯ ಜಾತಿಗಳನ್ನು ಎಸ್ಸಿ ಮೀಸಲು ಪಟ್ಟಿಯಿಂದ ಹೊರಗಿಡಬೇಕೆಂದು ರಾಜ್ಯಸಭೆ ಮಾಜಿ ಸದಸ್ಯ ಕೆ ಬಿ ಶಾಣಪ್ಪ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಸ್ಪೃಶ್ಯ ಜಾತಿಗಳನ್ನು ಎಸ್ಸಿ ಮೀಸಲು ಪಟ್ಟಿಯಿಂದ ಬೇರ್ಪಡಿಸಬೇಕು.. ರಾಜ್ಯಸಭೆ ಮಾಜಿ ಸದಸ್ಯ ಒತ್ತಾಯ - Former Rajya Sabha member K B Shannappa
ಲಮಾಣಿ, ಬೋವಿ, ಕೊರಮ ಹಾಗೂ ಕೊರಚ ಜಾತಿಗಳು ಸ್ಪೃಶ್ಯ ಜಾತಿಗಳಾಗಿವೆ. ದೇಶದಲ್ಲಿ ಎಲ್ಲಿಯೂ ಈ ಜಾತಿಗಳು ಎಸ್ಸಿ ಪಟ್ಟಿಯಲ್ಲಿಲ್ಲ. ಆದರೆ, ಕರ್ನಾಟಕದಲ್ಲಿ ಮಾತ್ರ ಈ ನಾಲ್ಕು ಜಾತಿಗಳನ್ನು ಎಸ್ಸಿ ಪಟ್ಟಿಯಲ್ಲಿ ಸೇರಿಸಿದ್ದು, ಅಸ್ಪೃಶ್ಯ ಜಾತಿಗಳಿಗೆ ಇದರಿಂದ ತೀವ್ರ ಅನ್ಯಾಯವಾಗುತ್ತಿದೆ..
ಕಲಬುರಗಿಯಲ್ಲಿ ಕರ್ನಾಟಕ ಅಸ್ಪೃಶ್ಯ ಸಮುದಾಯಗಳ ಮಹಾಸಭಾದ ವತಿಯಿಂದ ಮಾತನಾಡಿದ ಅವರು, ಲಮಾಣಿ, ಬೋವಿ, ಕೊರಮ ಹಾಗೂ ಕೊರಚ ಜಾತಿಗಳು ಸ್ಪೃಶ್ಯ ಜಾತಿಗಳಾಗಿವೆ. ದೇಶದಲ್ಲಿ ಎಲ್ಲಿಯೂ ಈ ಜಾತಿಗಳು ಎಸ್ಸಿ ಪಟ್ಟಿಯಲ್ಲಿಲ್ಲ. ಆದರೆ, ಕರ್ನಾಟಕದಲ್ಲಿ ಮಾತ್ರ ಈ ನಾಲ್ಕು ಜಾತಿಗಳನ್ನು ಎಸ್ಸಿ ಪಟ್ಟಿಯಲ್ಲಿ ಸೇರಿಸಿದ್ದು, ಅಸ್ಪೃಶ್ಯ ಜಾತಿಗಳಿಗೆ ಇದರಿಂದ ತೀವ್ರ ಅನ್ಯಾಯವಾಗುತ್ತಿದೆ.
ಈ ಕುರಿತು ಅಭಿಪ್ರಾಯ ತಿಳಿಸಲು ಈಗಾಗಲೇ ಸುಪ್ರೀಂಕೋರ್ಟ್ ಸೂಚಿಸಿದೆ. ಆದರೂ, ರಾಜ್ಯ ಸರ್ಕಾರ ಅನಗತ್ಯ ವಿಳಂಬ ಮಾಡುತ್ತಿದೆ. ಕೂಡಲೇ ಸುಪ್ರಿಂಕೋರ್ಟ್‌ಗೆ ಅಭಿಪ್ರಾಯ ತಿಳಿಸಬೇಕು ಎಂದು ಒತ್ತಾಯಿಸಿದರು. ಆದಷ್ಟು ಬೇಗ ಎಸ್ಸಿ ಮೀಸಲಾತಿಗೆ ಅರ್ಹರಾಗಿರೋ ಅಸ್ಪೃಶ್ಯ ಜಾತಿಗಳಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದಲ್ಲಿ ಕರ್ನಾಟಕ ಅಸ್ಪೃಶ್ಯ ಸಮುದಾಯಗಳ ನೇತೃತ್ವದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಕೆ ಬಿ ಶಾಣಪ್ಪ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.