ಕರ್ನಾಟಕ

karnataka

ETV Bharat / state

ಜನರಿಂದ ತಿರಸ್ಕೃತಗೊಂಡ ಸರ್ಕಾರದಿಂದ ಸದನಕ್ಕೆ ಅಡ್ಡಿ: ಭಗವಂತ ಖೂಬಾ

70 ವರ್ಷಗಳಲ್ಲಿ ತೆಗೆದುಕೊಳ್ಳದ ನಿರ್ಣಯಗಳನ್ನು ಕಳೆದ ಏಳು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡಿದ್ದಾರೆ. ದಲಿತರಿಗೆ, ಮಹಿಳೆಯರಿಗೆ, ಆದಿವಾಸಿಗಳಿಗೆ, ಹಿಂದುಳಿದ ವರ್ಗಗಳಿಗೆ ತಮ್ಮ ಮಂತ್ರಿಮಂಡಲದಲ್ಲಿ ಸಚಿವ ಸ್ಥಾನ ನೀಡುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.

Kalburgi
ಕೇಂದ್ರ ಸಚಿವ ಭಗವಂತ ಖೂಬಾ

By

Published : Aug 18, 2021, 12:13 PM IST

ಕಲಬುರಗಿ: ಜನರಿಂದ ತಿರಸ್ಕೃತಗೊಂಡ ಸರ್ಕಾರ ಸದನಕ್ಕೆ ಅಡ್ಡಿಪಡಿಸೋಕೆ ಮುಂದಾಗಿದೆ. ಕಾಂಗ್ರೆಸ್​ನವರು ವೋಟ್ ಬ್ಯಾಂಕ್ ಕೈ ತಪ್ಪಿ ಹೋಗುವ ಭಯದಿಂದ ಪಾರ್ಲಿಮೆಂಟ್​ಗೆ ಅಡ್ಟಿಪಡಿಸೋಕೆ ಮುಂದಾಗಿದ್ದಾರೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಆಕ್ರೋಶ ಹೊರಹಾಕಿದ್ದಾರೆ.

ಜಿಲ್ಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 70 ವರ್ಷಗಳಲ್ಲಿ ತೆಗೆದುಕೊಳ್ಳದ ನಿರ್ಣಯಗಳನ್ನು ಕಳೆದ ಏಳು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡಿದ್ದಾರೆ. ದಲಿತರಿಗೆ, ಮಹಿಳೆಯರಿಗೆ, ಆದಿವಾಸಿಗಳಿಗೆ, ಹಿಂದುಳಿದ ವರ್ಗಗಳಿಗೆ ತಮ್ಮ ಮಂತ್ರಿಮಂಡಲದಲ್ಲಿ ಸಚಿವ ಸ್ಥಾನ ನೀಡುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಕರ್ನಾಟಕಕ್ಕೆ ಈ ಹಿಂದೆ ಒಂದೂ ಸ್ಥಾನವನ್ನು ನೀಡಿರಲಿಲ್ಲ. ಸದ್ಯ ಇಡೀ ದೇಶದಲ್ಲಿ ಆರು ಜನ ಸಚಿವರು ಇರುವ ರಾಜ್ಯ ಕರ್ನಾಟಕ. ಒಬ್ಬ ಸಾಧಾರಣ ಕಾರ್ಯಕರ್ತನಿಗೆ ಟಿಕೆಟ್ ಕೊಟ್ಟು ಸಂಸದರನ್ನಾಗಿ ಮಾಡಿದೆ. ಇವಾಗ ಮತ್ತೆ ಸಚಿವರನ್ನಾಗಿ ಮಾಡಿದೆ ಎಂದರು.

ಕೇಂದ್ರ ಸಚಿವ ಭಗವಂತ ಖೂಬಾ

ಇನ್ನು ಸದನದಲ್ಲಿ ಸಂಪುಟದ ಸಹೋದ್ಯೋಗಿಗಳನ್ನು ಪರಿಚಯ ಮಾಡಿಸಿಕೊಡುವ ಪರಂಪರೆ ಇದೆ. ಆದರೆ, ಸದನದ ಮೊದಲ ದಿನ ಮೋದಿ ಅವರು ಪರಿಚಯ ಮಾಡುವ ಸಂಧರ್ಭದಲ್ಲಿ ಕಾಂಗ್ರೆಸ್ ಮತ್ತು ಮಿತ್ರಪಕ್ಷದವರು ಅಡ್ಡಿಪಡಿಸಿ ಸದನದಲ್ಲಿ ಗೊಂದಲ ಉಂಟು ಮಾಡಿದರು. ಹೀಗಾಗಿ ಬಿಜೆಪಿಯ 39 ಹೊಸ ಸದಸ್ಯರು ಜನಾಶೀರ್ವಾದ ಯಾತ್ರೆಯಲ್ಲಿ ಭಾಗಿಯಾಗಿ ನೇರವಾಗಿ ಜನರ ಮುಂದೆ ಬರಲು ನಿರ್ಧರಿಸಿದ್ದಾರೆ ಎಂದು ತಿಳಿಸಿದರು.

ABOUT THE AUTHOR

...view details