ಕಲಬುರಗಿ: ಅನ್ಯಕೋಮಿನ ಯುವತಿ ಪ್ರೀತಿಸಿದ್ದಕ್ಕೆ ಯುವಕನ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಜಿಲ್ಲೆಯ ವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಹ್ಮದ ಶಾಬುದ್ದಿನ್ (19) ಹಾಗೂ ಮಹ್ಮದ ನವಾಜ್ (19) ಎಂಬುವರೆ ಬಂಧಿತ ಆರೋಪಿಗಳಾಗಿದ್ದಾರೆ.
ಬುಧವಾರ ರಾತ್ರಿ ವಿಜಯ್ ಕಾಂಬಳೆ ಎಂಬ ಯುವಕನನ್ನು ಹತ್ಯೆ ಮಾಡಿದ ಆರೋಪಿಗಳು ತಲೆಮರೆಸಿಕೊಂಡಿದ್ದರು. ಆರೋಪಿ ಶಾಬುದ್ದಿನ್ನ ಸಹೋದರಿಯನ್ನ ಕಳೆದ 2 ವರ್ಷದಿಂದ ವಿಜಯ್ ಕಾಂಬಳೆ ಪ್ರೀತಿ ಮಾಡುತ್ತಿದ್ದ. ಹಲವು ಬಾರಿ ಈ ಬಗ್ಗೆ ತಿಳಿ ಹೇಳಿದರೂ ಪ್ರೀತಿ ಮುಂದುವರೆದಿತ್ತು. ಬುಧವಾರ ವಾಡಿ ಪಟ್ಟಣದ ರೈಲ್ವೆ ನಿಲ್ದಾಣ ಬಳಿ ಕುಳಿತಿದ್ದ ವೇಳೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.