ಕಲಬುರಗಿ:ಸಾರಿಗೆ ನೌಕರರಿಗೆ ಸೆಡ್ಡು ಹೊಡೆಯಲು ಮುಂದಾದ ಅಧಿಕಾರಿಗಳು, ಖಾಸಗಿ ಬಸ್ಗಳ ಜೊತೆಗೆ ಶಾಲಾ ಬಸ್ಗಳನ್ನೂ ಅಖಾಡಕ್ಕಿಳಿಸಿದ್ದಾರೆ.
ಒಂದೆಡೆ ಸಾರಿಗೆ ನೌಕರರು ಬೇಡಿಕೆ ಈಡೇರಿಸದಿದ್ದರೆ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಇನ್ನೊಂದೆಡೆ ಅಧಿಕಾರಿಗಳು ಸಹ ನಿಮ್ಮ ಪಾಡಿಗೆ ನೀವು ಹೋರಾಟ ನಡೆಸಿ, ನಾವು ನಮ್ಮ ಕೆಲಸ ಮಾಡುತ್ತೇವೆ ಎಂದು ಶಾಲಾ ಬಸ್ಗಳ ಮೂಲಕ ಪ್ರಯಾಣಿಕರಿಗೆ ಸೇವೆ ಕಲ್ಪಿಸೋದಕ್ಕೆ ಮುಂದಾಗಿದ್ದಾರೆ.
ಶಾಲಾ ಬಸ್ಗಳಿಗೂ ಆರ್ಟಿಒ ಅಧಿಕಾರಿಗಳು ತಾತ್ಕಾಲಿಕ ಪರವಾನಗಿ ನೀಡಿದ್ದಾರೆ. ಸದ್ಯ ಬಸ್ ನಿಲ್ದಾಣದಲ್ಲಿ ಕಲಬುರಗಿಯಿಂದ ಜೇವರ್ಗಿ ರೂಟ್ನಲ್ಲಿ ಶಾಲಾ ಬಸ್ಗಳು ಸಂಚರಿಸಲಿವೆ. ಜ್ಞಾನೋದಯ ಹೈಯರ್ ಪ್ರಮೈರಿ ಸ್ಕೂಲ್ ಬಸ್ ಪ್ರಯಾಣಿಕರಿಗೆ ಸೇವೆ ನೀಡಲು ಪರವಾನಗಿ ಪಡೆದು ಸೇವೆಗೆ ಮುಂದಾಗಿದೆ.
ಶಾಲಾ ಬಸ್ಗಳನ್ನು ಅಖಾಡಕ್ಕಿಳಿಸಿದ ಅಧಿಕಾರಿಗಳು ರೋಗಿಗಳ ಪರದಾಟ
ಕಣ್ಣಿನ ಶಸ್ತ್ರ ಚಿಕಿತ್ಸೆಗೆಂದು ಬಂದಿದ್ದ ಇಬ್ಬರು ಅಜ್ಜಿಯರು ತೀವ್ರ ಸಂಕಷ್ಟ ಅನುಭವಿಸಿದರು. ಬಸಮ್ಮ ಹಾಗೂ ಮರೆಮ್ಮ ಎಂಬುವರು ಕಲಬುರಗಿಯಲ್ಲಿ ನೇತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದು, ಚಿಂಚೋಳಿಗೆ ಹೋಗಬೇಕಾಗಿತ್ತು. ಒಂದೆಡೆ ಸಮಯಕ್ಕೆ ಬಸ್ ಇಲ್ಲದೆ ಇನ್ನೊಂದೆಡೆ ಕಣ್ಣಿಗೆ ಗಾಳಿ ತಗುಲುವಂತಿಲ್ಲದ ಕಾರಣ ಇಬ್ಬರು ಅಜ್ಜಿಯರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.