ಕಲಬುರಗಿ: ಕಳೆದ ಮೂರು ವರ್ಷಗಳಿಂದ ಕಳ್ಳತನ ಮಾಡಿಕೊಂಡು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಖತರ್ನಾಕ ಕಳ್ಳ ಸಹೋದರರು ಕಡೆಗೂ ನರೋಣಾ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಮೂರು ವರ್ಷದಿಂದ ತಪ್ಪಿಸಿಕೊಂಡು ಓಡಾಡ್ತಿದ್ದ ಕಳ್ಳ ಸಹೋದರರು ಪೊಲೀಸ್ ಬಲೆಗೆ - ಕಳ್ಳ ಸಹೋದರರು ಬಂಧನ
ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪದಡಿ ಇಬ್ಬರು ಸಹೋದರರನ್ನು ಪೊಲೀಸರು ಬಂಧಿಸಿದ್ದಾರೆ.
ಕಳ್ಳ ಸಹೋದರರು ಪೊಲೀಸ್ ಬಲೆಗೆ
ಸುರೇಶ ಚವ್ಹಾಣ್ ಮತ್ತು ಅಪ್ಪು ಚವ್ಹಾಣ್ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಸಹೋದರರಿಬ್ಬರೂ ಸೇರಿ ಕಳ್ಳತನ ಮಾಡುತ್ತಿದ್ದರು.
ವೈನ್ ಶಾಪ್, ಕಿರಾಣಿ ಅಂಗಡಿ ಕಳ್ಳತನ ಪ್ರಕರಣಗಳ ಆರೋಪಗಳು ಇವರ ಮೇಲಿವೆ. ಅಲ್ಲದೆ ನಿಲ್ಲಿಸಿದ ಜೆಸಿಬಿ ಯಂತ್ರದಿಂದ ಡೀಸೆಲ್ ಕಳ್ಳತನ ಮತ್ತು ಪಂಚರ್ ಅಂಗಡಿಗಳಲ್ಲಿ ಟ್ರ್ಯಾಕ್ಟರ್ ಟಯರ್ ಕಳ್ಳತನ ಮಾಡಿ ಪರಾರಿಯಾಗಿರುವ ಆರೋಪವಿದೆ. ಇಷ್ಟು ದಿನದಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನಿಸಿದ್ದ ಸಹೋದರರು ಇದೀಗ ಗೋಳಾ (ಬಿ) ಕ್ರಾಸ್ ಬಳಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.