ಕಲಬುರಗಿ: ಮನೆ ಕಳ್ಳತನಕ್ಕೆ ಬಂದಿದ್ದ ಖದೀಮರು ಮಹಿಳೆ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿ ಆಗಿರುವ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಕೊಳ್ಳುರ ಗ್ರಾಮದಲ್ಲಿ ನಡೆದಿದೆ.
ಗುಂಡಮ್ಮ ಬೂತಪಳ್ಳಿ ಹಲ್ಲೆಯಿಂದ ಗಂಭೀರ ಗಾಯಗೊಂಡಿರುವ ಮಹಿಳೆ. ಭಾನುವಾರ ತಡರಾತ್ರಿ ಮನೆ ಕಳ್ಳತನಕ್ಕೆ ಖದೀಮರು ಬಂದಿದ್ದಾರೆ. ಆಗ ಕಳ್ಳರ ಶಬ್ದ ಕೇಳಿ ಎಚ್ಚರಗೊಂಡ ಗುಂಡಮ್ಮ ಕಿರುಚಿದ್ದಾರೆ. ಆಗ ಕಳ್ಳರು ಮಚ್ಚಿನಿಂದ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.