ಕರ್ನಾಟಕ

karnataka

ETV Bharat / state

ರೈಲು ನಿಲ್ದಾಣದಲ್ಲಿ ಆರಂಭವಾಯ್ತು ಕೊರೊನಾ ಸ್ಕ್ರೀನಿಂಗ್ ಪ್ರಕ್ರಿಯೆ - ಕಲಬುರಗಿಯಲ್ಲಿ ಸ್ಕ್ರೀನಿಂಗ್ ಪ್ರಕ್ರಿಯೆ

ಕೊರೊನಾ ಸೋಂಕಿನಿಂದ ವೃದ್ಧನೋರ್ವ ಸಾವನ್ನಪ್ಪಿದ್ದು, ನಗರದಾದ್ಯಂತ ಆತಂಕದ ಛಾಯೆ ಮನೆಮಾಡಿದೆ.

The screening process started at the kalaburagi train station
ರೈಲು ನಿಲ್ದಾಣದಲ್ಲಿ ಆರಂಭವಾಯ್ತು ಸ್ಕ್ರೀನಿಂಗ್ ಪ್ರಕ್ರಿಯೆ

By

Published : Mar 14, 2020, 8:03 PM IST

ಕಲಬುರಗಿ:ಕೊರೊನಾ ವೈರಸ್ ಸೋಂಕು ಬಾಧಿಸದಂತೆ ಮುನ್ನೆಚ್ಚೆರಿಕೆ ಕ್ರಮವಾಗಿ ರೈಲು ನಿಲ್ದಾಣದಲ್ಲಿ ಸ್ಕ್ರೀನಿಂಗ್ ಪ್ರಕ್ರಿಯೆ ಶುರು ಮಾಡಲಾಗಿದೆ.

ರೈಲು ನಿಲ್ದಾಣದಲ್ಲಿ ಆರಂಭವಾಯ್ತು ಸ್ಕ್ರೀನಿಂಗ್ ಪ್ರಕ್ರಿಯೆ

ವೃದ್ಧನೋರ್ವ ಮಾರ ವೈರಸ್ ನಿಂದ ನಿಧನವಾದ ಪರಿಣಾಮ ಕೊವಿಡ್-19 ಭೀತಿ ‌ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಕಲಬುರಗಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸ್ಕ್ರೀನಿಂಗ್ (ತಪಾಸಣೆ) ಮಾಡಲಾಗುತ್ತಿದೆ. ಸದಾ ಜನಸಂದಣಿ ಪ್ರದೇಶವಾದ ಕಲಬುರಗಿ ರೈಲು ನಿಲ್ದಾಣದಲ್ಲಿ ಪ್ರತಿನಿತ್ಯ ಹೈದ್ರಾಬಾದ್, ಸೊಲ್ಲಾಪುರ, ಬೆಂಗಳೂರು, ಮುಂಬೈ ಸೇರಿದಂತೆ ಹಲವೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಹಾಗಾಗಿ ನಿಲ್ದಾಣದ ನೆಲಹಾಸು, ಸೀಟಿಂಗ್ ಚೇರ್, ಟಿಕೆಟ್ ಕೌಂಟರ್ ಸೇರಿದಂತೆ ಎಲ್ಲವನ್ನು ಸ್ವಚ್ಛಗೊಳಿಸಲಾಗುತ್ತಿದೆ. ಜೊತೆಗೆ ಕೊರೊನಾ ವೈರಸ್ ಕುರಿತು ಮೈಕ್ ಮೂಲಕ ನಿರಂತರ ‌ಜಾಗೃತಿ ಮೂಡಿಸಲಾಗುತ್ತಿದೆ.

ಕಡಿಮೆಯಾದ ಪ್ರಯಾಣಿಕರ ಸಂಖ್ಯೆ:

ಕೊರೋನಾದಿಂದ ಬೇರೆ, ಬೇರೆ ಕಡೆಯಿಂದ ಆಗಮಿಸುತ್ತಿದ್ದ ಜನ ಕಲಬುರಗಿಗೆ ಬರಲು ಹೆದರುತ್ತಿದ್ದು, ಇದರಿಂದ ರೈಲ್ವೇ ಪ್ರಯಾಣಿಕರ ಸಂಖ್ಯೆಯೂ ಗಣನೀಯವಾಗಿ ಇಳಿಮುಖವಾಗಿದೆ.

ABOUT THE AUTHOR

...view details