ಕಲಬುರಗಿ:ತಾಲೂಕು ಪಂಚಾಯತ್ ಸದಸ್ಯರಾದವರೂ ಜಿಲ್ಲಾ ಪಂಚಾಯತ್‌ಗೆ ಹೋಗುವ ಕನಸು ಕಾಣ್ತಾರೆ. ಆದ್ರೆ ಇಲ್ಲೊಬ್ಬ ತಾಲೂಕು ಪಂಚಾಯತ್ ಸದಸ್ಯ ಜನರ ಒತ್ತಡಕ್ಕೆ ಮಣಿದು ಮರಳಿ ಗ್ರಾಮ ಪಂಚಾಯತ್ ಸದಸ್ಯ ಸ್ಥಾನಕ್ಕೆ ಸ್ಪರ್ಧೆಗೆ ಇಳಿಯುವ ಮೂಲಕ ಗ್ರಾಮಸ್ಥರ ಸೇವಕನಾಗಲು ಮುಂದಾಗಿದ್ದಾರೆ.
ಸದ್ಯ ತಾಲೂಕು ಪಂಚಾಯತ್ ಸದಸ್ಯರಾಗಿರುವ ಮೂಲತಃ ಡೊಂಗರಗಾಂವ್ ಗ್ರಾಮದ ನಿವಾಸಿ ಸುರೇಶ್ ಭರಣಿ ಗ್ರಾಮಸ್ಥರ ಒತ್ತಡಕ್ಕೆ ಮಣಿದು ಗ್ರಾಮ ಪಂಚಾಯತ್ ಚುನಾವಣೆ ಕಣದಲ್ಲಿದ್ದಾರೆ. ಬ್ಲಾಕ್ ಎರಡರಲ್ಲಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಪದವೀಧರರಾದ ಇವರು ಪ್ರಥಮ ಬಾರಿಗೆ 1992ರಲ್ಲಿ ಡೊಂಗರಗಾಂವ ಗ್ರಾಮ ಪಂಚಾಯತ್ ಸದಸ್ಯರಾಗುವ ಮೂಲಕ ರಾಜಕೀಯ ಪ್ರವೇಶ ಪಡೆದಿದ್ದಾರೆ.
ಇದನ್ನೂ ಓದಿ : ಗ್ರಾ.ಪಂ. ಚುನಾವಣಾ ಅಖಾಡಕ್ಕಿಳಿದ ಸ್ನಾತಕೋತ್ತರ ಪದವೀಧರ ದಂಪತಿ: ಅಭಿವೃದ್ಧಿಯ ವಾಗ್ದಾನ
ಒಂದು ಬಾರಿ ಗ್ರಾಮ ಪಂಚಾಯತ್‌ಗೆ ಎಂಟ್ರಿ ಪಡೆದ ಸುರೇಶ್ ಭರಣಿ ಹಿಂದಿರುಗಿ ನೋಡಿಯೇ ಇಲ್ಲ, ಸತತವಾಗಿ 2005 ರವರೆಗೆ ಮೂರು ಬಾರಿ ಗ್ರಾಮ ಪಂಚಾಯತ್ ಸದಸ್ಯರಾಗಿ, ಎರಡು ಬಾರಿ ಅಧ್ಯಕ್ಷರಾಗಿ ಜನರ ಸೇವೆ ಸಲ್ಲಿಸಿದ್ದಾರೆ. ಬಳಿಕ 2005 ರಲ್ಲಿ ಕಮಲಾಪುರ ತಾಪಂ ಸದಸ್ಯರಾಗಿ ಆಯ್ಕೆಯಾಗಿದ್ದರು. 2010 ರಲ್ಲಿ ಇವರ ಪುತ್ರ ಮಾರ್ಷಾಲ್ ಭರಣಿ ಡೊಂಗರಗಾಂವ ಗ್ರಾಮ ಪಂಚಾಯತ್ ಸದಸ್ಯರಾದರು.