ಕಲಬುರಗಿ:ಇಲ್ಲಿನ ತಾರಫೈಲ್ ಬಡಾವಣೆಯಲ್ಲಿ ಕಲ್ಲಿನ ಮಳೆ ಸುರಿಯುತ್ತಿದ್ದು ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಕಳೆದ ಮೂರು ದಿನಗಳಿಂದ ಬಡಾವಣೆಯಲ್ಲಿರುವ ಮನೆಗಳ ಮೇಲೆ ಕಲ್ಲುಗಳು ಬೀಳಲು ಆರಂಭವಾಗಿದೆ.
ರಾತ್ರೋರಾತ್ರಿ ಮನೆಮೇಲೆ ಬೀಳುತ್ತೆ ರಾಶಿ ರಾಶಿ ಕಲ್ಲು... ಕಾರಣ ತಿಳಿಯದ ಜನರು ಕಂಗಾಲು..! - Railway
ಕಲಬುರಗಿ ಜಿಲ್ಲೆಯ ತಾರಫೈಲ್ ಬಡಾವಣೆಯಲ್ಲಿ ರಾತ್ರಿಯಾಗುತ್ತಿದ್ದಂತೆ ಕಲ್ಲಿನ ಸುರಿಮಳೆ ಸುರಿಯಲಾರಂಭಿಸುತ್ತಿದೆ. ಇದರಿಂದ ಭಯಗೊಂಡಿರುವ ಸ್ಥಳೀಯರು ರಾತ್ರಿ ಪೂರ್ತಿ ಜಾಗರಣೆ ಮಾಡುವಂತಾಗಿದೆ.
ರಾತ್ರಿಯಾಗುತ್ತಿದ್ದಂತೆ ಕಲ್ಲಿನ ಸುರಿಮಳೆ ಸುರಿಯಲಾರಂಭಿಸುತ್ತಿದೆ ಎಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಿದ್ದಾರೆ. ಬಡಾವಣೆಯ ಸುಮಾರು 15 ರಿಂದ 20 ಮನೆಗಳ ಮೇಲೆ ಕಲ್ಲುಗಳು ಬೀಳುತ್ತಿದ್ದು, ಇಡೀ ರಾತ್ರಿ ನಿವಾಸಿಗಳು ನಿದ್ದೆಗೆಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಜೆಯಾದರೆ ಇಲ್ಲಿನ ಜನರು ಮನೆಯಿಂದ ಹೊರಬರಲು ಆತಂಕ ಪಡುತ್ತಿದ್ದಾರೆ.
ತಾರಫೈಲ್ ಬಡಾವಣೆಯ ಪಕ್ಕದಲ್ಲಿ ರೈಲ್ವೆ ಹಳಿಯಿದೆ. ಇಲ್ಲಿನ ಕಲ್ಲುಗಳನ್ನ ದುಷ್ಕರ್ಮಿಗಳು ಎಸೆಯುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಸುದ್ದಿ ತಿಳಿದ ಪೊಲೀಸರು ರಾತ್ರಿ ಗಸ್ತು ಮಾಡಿದರೂ ಇಲ್ಲಿವರೆಗೆ ಕಲ್ಲು ಎಲ್ಲಿಂದ ಬೀಳುತ್ತಿದೆ ಎಂಬುದು ಮಾತ್ರ ತಿಳಿಯುತ್ತಿಲ್ಲವಂತೆ .