ಕರ್ನಾಟಕ

karnataka

By

Published : Apr 16, 2023, 10:14 AM IST

Updated : Apr 16, 2023, 11:56 AM IST

ETV Bharat / state

ಬಿಜೆಪಿ ಶಾಸಕ ಅವಿನಾಶ್ ಜಾಧವ್, ಬೆಂಬಲಿಗರ ಕಾರಿನ ಮೇಲೆ‌ ಕಲ್ಲು‌ ತೂರಾಟ

ಪ್ರಚಾ​ರಕ್ಕೆ ತೆರ​ಳಿದ್ದ ಬಿಜೆಪಿ ಅಭ್ಯರ್ಥಿ, ಚಿಂಚೋಳಿ ಶಾಸಕ ಅವಿನಾಶ್ ಜಾಧವ್ ಹಾಗೂ ಅವರ ಬೆಂಬಲಿಗರ ವಾಹನಗಳ ಮೇಲೆ‌ ಕಲ್ಲು‌ ತೂರಾಟ ನಡೆಸಲಾಗಿದೆ. ಇದು ಕಾಂಗ್ರೆ​ಸ್ಸಿ​ಗರ ಕೈವಾ​ಡ ಎಂದು ಅವಿ​ನಾಶ್‌ ಜಾಧವ್‌ ಆರೋಪಿ​ಸಿ​ದ್ದಾ​ರೆ.

Stone pelted on BJP MLA Avinash Jadhav and supporters car
ಅವಿನಾಶ್ ಜಾಧವ್, ಬೆಂಬಲಿಗರ ಕಾರಿನ ಮೇಲೆ‌ ಕಲ್ಲು‌ ತೂರಾಟ

ಶಾಸಕ ಅವಿನಾಶ್ ಜಾಧವ್ ಪ್ರತಿಕ್ರಿಯೆ..

ಕಲಬುರಗಿ: ಚಿಂಚೋಳಿ ತಾಲೂಕಿನ ಚಂದನಕೇರಾ ಗ್ರಾಮದಲ್ಲಿ‌‌ ಶಾಸಕ‌ ಅವಿನಾಶ್ ಜಾಧವ್​ ಹಾಗೂ ಅವರ ಬೆಂಬಲಿಗರ ಕಾರು‌ಗಳ ಮೇಲೆ ಕಲ್ಲು ತೂರಾಟ ನಡೆ​ದಿ​ದೆ. ಘಟನೆಯಲ್ಲಿ ಐದು ವಾಹನಗಳು ಜಖಂಗೊಂಡಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಶನಿವಾರ ಸಂಜೆ ಸಂಸದ ಉಮೇಶ ಜಾಧವ್​ ಅವರ ಪುತ್ರ ಚಿಂಚೋಳಿ ಮೀಸಲು ಕ್ಷೇತ್ರದ ಬಿಜೆಪಿ ಹಾಲಿ ಶಾಸಕ ಹಾಗೂ ಬಿಜೆಪಿ‌ ಅಭ್ಯರ್ಥಿ ಡಾ. ಅವಿನಾಶ್ ಜಾಧವ್​ ಹಾಗೂ ಅವರ ಸಂಗಡಿಗರು ಚಂದನಕೇರಾ ಗ್ರಾಮದ ದಲಿತರ ಓಣಿಯಲ್ಲಿ ಪ್ರಚಾರಕ್ಕೆ ತೆರಳಿದ್ದರು. ಪ್ರಚಾರ‌ ಮುಗಿಸಿ ಓಣಿಯಿಂದ ಹೊರಗೆ ಬರುವಾಗ ಏಕಾಏಕಿ‌ ಕೇಲ ಕಿಡಿಗೇಡಿಗಳು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ನಮ್ಮ ಮನೆ ಮೇಲೆ ನಡೆದ ಕಲ್ಲು ತೂರಾಟ ವಿರೋಧ ಪಕ್ಷ​ದ ಪ್ರಾಯೋಜಿತ ಕೃತ್ಯ: ಸಂಸದ ಬಿ ವೈ ರಾಘವೇಂದ್ರ

ಪ್ರಚಾರ ಮುಗಿಸಿ ಬರುವಾಗ ಕೆಲವರು ಡಾ.ಅಂಬೇಡ್ಕರ್ ಮೂರ್ತಿಗೆ ಮಾರ್ಲಾಪಣೆ ಯಾಕೆ ಮಾಡಿಲ್ಲ‌? ಎಂದು ಜಗಳಕ್ಕೆ ಮುಂದಾಗಿದ್ದರಂತೆ. ಈ ವೇಳೆ ಅವಿನಾಶ್ ಜಾಧವ್ ಅವರ ಬೆಂಬಲಿಗರ ಬಟ್ಟೆ ಹಿಡಿದು ಎಳೆದಾಡಿದ್ದಲ್ಲದೆ ಕೆಲವರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ನಂತರ ಉದ್ದೇಶ ಪೂರ್ವಕವಾಗಿ ಕಲ್ಲು ತೂರಾಟ ಮಾಡಲಾಗಿದೆ. ಘಟನೆಯಲ್ಲಿ ಪ್ರಚಾರದ ವಾಹನ ಸೇರಿ ಐದು ವಾಹನಗಳ ಗಾಜು ಪುಡಿ ಪುಡಿ ಮಾಡಲಾಗಿದೆ. ಕಲ್ಲುಗಳನ್ನು ವಾಹನಗಳ ಮೇಲೆ ಎಸೆದು ದಾಳಿ‌ ಮಾಡಲಾಗಿದೆ. ವಾಹನದ ಒಳಗಡೆ ಕಲ್ಲುಗಳು ಬಿದ್ದಿವೆ‌. ಇದರಿಂದಾಗಿ ನಾಲ್ವರಿಗೆ ಗಾಯಗಳಾಗಿವೆ. ವ್ಯಕ್ತಿಯೊಬ್ಬರನ್ನು ಮನ ಬಂದಂತೆ ಎಳೆದಾಡಿ ಶರ್ಟ್ ಬಟನ್ ಹರಿದು ಹಾಕಲಾಗಿದೆ ಎಂದು ಜಾಧವ್​ ಬೆಂಬಲಿಗರು ಆರೋಪಿಸಿದ್ದಾರೆ.

ಇದನ್ನೂ ಓದಿ:ಚಿಂಚೋಳಿ ವಿಧಾನಸಭೆ ಉಪಚುನಾವಣೆಯಲ್ಲಿ ಅವಿನಾಶ್ ಜಾಧವ್ ಗೆಲುವು

ಸ್ಥಳಕ್ಕೆ ಕಾಳಗಿ, ರಟಕಲ್ ಠಾಣೆಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿ ಆಗಬಹುದಾದ ದೊಡ್ಡ ಅನಾಹುತ ತಪ್ಪಿಸಿದ್ದಾರೆ. ಸದ್ಯ‌ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು‌ ಸ್ಥಳಕ್ಕೆ ದೌಡಾಯಿಸುತ್ತಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

ಕಾಂಗ್ರೆ​ಸ್ಸಿ​ಗರ ಕೈವಾ​ಡ- ಶಾಸಕ ಜಾಧವ್​:ಕಾಂಗ್ರೆಸ್ ಕುತಂತ್ರದಿಂದ ಈ ದಾಳಿ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತರೇ ಕಲ್ಲು ತೂರಾಟ ಮಾಡಿದ್ದಾರೆ ಎಂದು ಶಾಸಕ ಅವಿನಾಶ್ ಜಾಧವ್​ ಆರೋಪ ಮಾಡಿದ್ದಾರೆ. ಕಾರ್ಯಕರ್ತರನ್ನು‌ ಮುಂದೆ ಬಿಟ್ಟು ಕಾಂಗ್ರೆಸ್ ಪುಂಡಾಟಿಕೆ ಮೆರೆದಿದೆ. ಹೆದರಿಸುವದು, ಬೆದರಿಸುವುದು, ದೌರ್ಜನ್ಯ ಎಸಗುವ ಕೀಳುಮಟ್ಟದ ರಾಜಕಾರಣ ಮಾಡೋದಕ್ಕೆ ಕಾಂಗ್ರೆಸ್ ಇಳಿದಿದೆ. ಚುನಾವಣೆ ನ್ಯಾಯಬದ್ಧ ರೀತಿಯಲ್ಲಿ ಮಾಡಿ. ಇಂತಹ‌ ಗೊಡ್ಡು ಬೆದರಿಕೆ, ಕೀಳು ಮಟ್ಟದ ತಂತ್ರಗಳಿಗೆ ನಾವು ಬಗ್ಗುವುದಿಲ್ಲ. ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ಮಾತನಾಡಿದ್ದೇನೆ. ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ‌ ಕೈಗೊಳ್ಳಲು ಆಗ್ರಹಿಸಲಾಗುವುದು ಎಂದು ಜಾಧವ್​ ತಿಳಿಸಿದ್ದಾರೆ.

ಇದನ್ನೂ ಓದಿ:ಶಾಲಾ ಆವರಣದಲ್ಲಿ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ - ವಿಡಿಯೋ

Last Updated : Apr 16, 2023, 11:56 AM IST

ABOUT THE AUTHOR

...view details