ಕಲಬುರಗಿ:ವಿಮಾನ ನಿಲ್ದಾಣ ನಾಮಕರಣ ವಿಚಾರ ದಿನದಿಂದ ದಿನಕ್ಕೆ ತಾರಕ್ಕೆರುತ್ತಿದೆ. ಕಲಬುರಗಿ ವಿಮಾನ ನಿಲ್ದಾಣಕ್ಕೆ ಸಂತ ಸೇವಾಲಾಲ್ ಹೆಸರು ನಾಮಕರಣ ಮಾಡುವಂತೆ ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಸಂಸದ ಉಮೇಶ್ ಜಾಧವ್ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲಬುರಗಿ ಏಪೋರ್ಟ್ಗೆ ಸಂತ ಸೇವಾಲಾಲ್ ಹೆಸರು ಪ್ರಸ್ತಾಪ.. ಜಾಧವ್ ವಿರುದ್ಧ ಜಾಲತಾಣಗಳಲ್ಲಿ ಆಕ್ರೋಶ!
ಕಲಬುರಗಿ ವಿಮಾನ ನಿಲ್ದಾಣಕ್ಕೆ ಸಂತ ಸೇವಾಲಾಲ್ ನಾಮಕರಣ ಮಾಡುವಂತೆ ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಸಂಸದ ಉಮೇಶ್ ಜಾಧವ್ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಸದ ಉಮೇಶ್ ಜಾಧವ್
ನಿನ್ನೆ ಲೋಕಸಭಾ ಅಧಿವೇಶನದ ಶೂನ್ಯ ವೇಳೆಯಲ್ಲಿ ಸಂಸದ ಜಾಧವ್, ವಿಮಾನ ನಿಲ್ದಾಣಕ್ಕೆ ಭೂಮಿ ಕೊಟ್ಟವರು ಬಂಜಾರ ಸಮಾಜದವರು. ನಿಲ್ದಾಣಕ್ಕೆ ಸಂತ ಸೇವಾಲಾಲ್ ಹೆಸರಿಡುವಂತೆ ಒತ್ತಡ ಕೇಳಿ ಬರುತ್ತಿದೆ ಎಂದು ಪ್ರಸ್ತಾಪಿಸಿದ್ದರು. ಇದೀಗ ಸಂಸದ ಜಾಧವ್ ಪ್ರಸ್ತಾಪಕ್ಕೆ ಸಾಮಾಜಿಕ ಜಾಲತಾಣದಲ್ಲಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೆಲವರು ಒಳ್ಳೆ ಜೋಕ್ ಎಂದು ಕಾಲೆಳೆಯುತ್ತಿದ್ದು, ಇನ್ನೂ ಕೆಲವರು ತಮ್ಮ ಸಮುದಾಯ ಮೆಚ್ಚಿಸುವ ಕಾರ್ಯ ಜಾಧವ್ ಕೈಬಿಡಲಿ ಎಂದು ಆಗ್ರಹಿಸಿದ್ದಾರೆ.