ಕರ್ನಾಟಕ

karnataka

ETV Bharat / state

ಮಕ್ಕಳ ಕಳ್ಳರೆಂಬ ವದಂತಿ: ಅಮಾಯಕ ತಂದೆ-ಮಗನಿಗೆ ಥಳಿಸಿದ ಸ್ಥಳೀಯರು

ಮಕ್ಕಳ ಕಳ್ಳರೆಂಬ ಅನುಮಾನದ ಮೇಲೆ ವೃತ್ತಿಯಲ್ಲಿ ಜ್ಯೋತಿಷಿ ಹಾಗೂ ಗಿಡ ಮೂಲಿಕೆ ಔಷಧಿ ಮಾರಾಟಗಾರರಾದ ಇಬ್ಬರಿಗೆ ಮನಬಂದಂತೆ ಥಳಿಸಿರುವ ಘಟನೆ ಚಿತ್ತಾಪುರದಲ್ಲಿ ನಡೆದಿದೆ.

ಮಕ್ಕಳ ಕಳ್ಳರ ವದಂತಿ; ಅಮಾಯಕ, ತಂದೆ ಮಗನ ಥಳಿಸಿದ ಸ್ಥಳೀಯರು

By

Published : Sep 15, 2019, 2:19 AM IST

ಕಲಬುರಗಿ:ಜಿಲ್ಲೆಯಲ್ಲಿ ಮಕ್ಕಳ ಕಳ್ಳರ ವದಂತಿ ಜೋರಾಗಿದ್ದು, ಮಕ್ಕಳ ಕಳ್ಳರೆಂದು ಅಮಾಯಕ ತಂದೆ, ಮಗನನ್ನು ಥಳಿಸಿರುವ ಘಟನೆ ಚಿತ್ತಾಪುರ ಸ್ಟೇಷನ್ ತಾಂಡದಲ್ಲಿ ನಡೆದಿದೆ.

ಮೂಲತಃ ಕಲಬುರಗಿ ಜಿಲ್ಲೆ ಬಬಲಾದ ಗ್ರಾಮದವರಾದ ಶಂಕರ್ ಜೋಷಿ ಹಾಗೂ ಸಂತೋಷ್ ಜೋಷಿ ತಾಂಡಾ ಗ್ರಾಮಸ್ಥರಿಂದ ಹಲ್ಲೆಗೆ ಒಳಗಾದ ತಂದೆ, ಮಗನಾಗಿದ್ದಾರೆ.

ವೃತ್ತಿಯಲ್ಲಿ ಜ್ಯೋತಿಷಿ ಹಾಗೂ ಗಿಡಮೂಲಿಕೆ ಔಷಧಿ ಮಾರಾಟಗಾರರಾದ ಇವರಿಬ್ಬರೂ ಕೆಲಸ ಮುಗಿಸಿ ಮರಳಿ ತಮ್ಮೂರಿಗೆ ಬರಲು ಸ್ಟೇಷನ್ ತಾಂಡಾ ಬಳಿ ನಿಂತಿದ್ದಾಗ ಮಗ ಸಂತೋಷ ಮಗುವೊಂದಕ್ಕೆ ಬಿಸ್ಕತ್​ ನೀಡಿದ್ದಾನೆ. ಇದರಿಂದ ಅನುಮಾನಗೊಂಡ ಗ್ರಾಮಸ್ಥರು ಮಕ್ಕಳ ಕಳ್ಳರು ಎಂದು ಇಬ್ಬರನ್ನೂ ಹಿಡಿದು ಥಳಿಸಿದ್ದಾರೆ.

ಅಮಾಯಕ ತಂದೆ, ಮಗನಿಗೆ ಥಳಿತ

ಸ್ಥಳಕ್ಕೆ ಆಗಮಿಸಿದ ಪೊಲೀಸರು ತಂದೆ, ಮಗನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇವರು ಗಿಡಮೂಲಿಕೆ ಹಾಗೂ ಜೋತಿಷ್ಯ ಕಾಯಕದವರು ಎಂದು ತಿಳಿದುಬಂದಿದೆ. ಹಲ್ಲೆಗೆ ಒಳಗಾದ ತಂದೆ, ಮಗನನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ವಿನಾಕಾರಣ ಅಮಾಯಕರನ್ನು ಥಳಿಸಿದ ನಾಲ್ವರ ವಿರುದ್ಧ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಓರ್ವನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details