ಕರ್ನಾಟಕ

karnataka

ETV Bharat / state

ಮಾರಕಾಸ್ತ್ರ ಹಿಡಿದು ದರೋಡೆಗೆ ಹೊಂಚು ಹಾಕಿ ನಿಂತಿದ್ದ ದರೋಡೆಕೋರರ ಬಂಧನ! - ಕಲಬುರಗಿ ಪೊಲೀಸ್

ಮಾರಕಾಸ್ತ್ರಗಳನ್ನು ಹಿಡಿದು ದರೋಡೆಗೆ ಹೊಂಚು ಹಾಕಿ ನಿಂತಿದ್ದ ಐವರು ದರೋಡೆಕೋರರನ್ನು ಬಂಧಿಸುವಲ್ಲಿ ಕಲಬುರಗಿ ಪೊಲೀಸರು ಯಶಸ್ವಿಯಾಗಿದ್ದಾರೆ.

arrest
arrest

By

Published : Nov 3, 2020, 8:53 PM IST

ಕಲಬುರಗಿ: ಜಂಬಗಾ-ಕಲಬುರಗಿ ಕ್ರಾಸ್ ಬಳಿ ಕೈಯಲ್ಲಿ ಮಾರಕಾಸ್ತ್ರಗಳು, ಖಾರದ ಪುಡಿ ಹಿಡಿದುಕೊಂಡು ದರೋಡೆ ಮಾಡಲು ಹೊಂಚು ಹಾಕಿ ನಿಂತಿದ್ದ ದರೋಡೆಕೋರರನ್ನು ಕಲಬುರಗಿ ಪೊಲೀಸರು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು, ರೌಡಿಶೀಟರ್ ಸೇರಿ ಐದು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಶಾಂತ ಅಲಿಯಾಸ್ ಪರಶ್ಯಾ, ಅಭಿಷೇಕ, ಶಿವಾನಂದ, ಚಂದ್ರಾಮ, ವಿಜಯ ಅಲಿಯಾಸ್ ಸಂಜು ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರಿಂದ ದರೋಡೆಗೆ ಬಳಸಲಾದ 2 ಚಾಕು, ಒಂದು ಬಡಿಗೆ, ಒಂದು ಖಾರದ ಪುಡಿ ಪ್ಯಾಕೆಟ್​ ಮತ್ತು ಹೀರೋ ಹೋಂಡಾ ಮೋಟಾರ್ ಸೈಕಲ್, 3600 ರೂ. ಹಣ ಜಪ್ತಿ ಮಾಡಿಕೊಳ್ಳಲಾಗಿದೆ.

ಐದು ಜನ ಆರೋಪಿಗಳ ಪೈಕಿ ಪ್ರಶಾಂತ ಅಲಿಯಾಸ್ ಪರಶ್ಯಾ ರೌಡಿಶೀಟರ್ ಆಗಿದ್ದು, ಈತನ ವಿರುದ್ಧ ಕಲಬುರಗಿ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳಿವೆ ಎಂದು ತಿಳಿದು ಬಂದಿದೆ.

ABOUT THE AUTHOR

...view details