ಸೇಡಂ :ವರುಣಾಘಾತದಿಂದ ಪಿಯು ಪರೀಕ್ಷೆ ಬರೆಯಲು ಬಂದ 24 ವಿದ್ಯಾರ್ಥಿಗಳ ಭವಿಷ್ಯ ನೀರಿನಲ್ಲಿ ಕೊಚ್ಚಿ ಹೋಗುವಂತಾಗಿದೆ.
ಮಳೆಯಿಂದಾಗಿ ಪಿಯುಸಿ ಪರೀಕ್ಷೆ ತಪ್ಪಿಸಿಕೊಂಡ 24 ವಿದ್ಯಾರ್ಥಿಗಳು
ಮಳೆಯ ರಭಸಕ್ಕೆ ಇಡೀ ಪಟ್ಟಣ ಜಲಮಯವಾದ ಕಾರಣ ಚಿಂಚೋಳಿ ಮಾರ್ಗದಲ್ಲಿ ಹರಿಯುವ ಕಮಲಾವತಿ ನದಿಯ ಬ್ರಿಡ್ಜ್ ಸಂಪೂರ್ಣ ಮುಳುಗಡೆಯಾಗಿತ್ತು. ಇದರಿಂದ ದಾರಿ ಕಾಣದೆ ಕಂಗಾಲಾದ ವಿದ್ಯಾರ್ಥಿಗಳು ಕಂಗೆಡುವಂತಾಯ್ತು..
ತಾಲೂಕಿನ ವಿವಿಧ ಗ್ರಾಮಗಳಿಂದ ಪಿಯು ಪರೀಕ್ಷೆ ಬರೆಯಲು ಶುಕ್ರವಾರ ಬೆಳಗ್ಗೆ ವಿದ್ಯಾರ್ಥಿಗಳು ಪಟ್ಟಣದತ್ತ ಆಗಮಿಸುತ್ತಿದ್ದರು. ಆದರೆ, ಮಳೆಯ ರಭಸಕ್ಕೆ ಇಡೀ ಪಟ್ಟಣ ಜಲಮಯವಾದ ಕಾರಣ ಚಿಂಚೋಳಿ ಮಾರ್ಗದಲ್ಲಿ ಹರಿಯುವ ಕಮಲಾವತಿ ನದಿಯ ಬ್ರಿಡ್ಜ್ ಸಂಪೂರ್ಣ ಮುಳುಗಡೆಯಾಗಿತ್ತು. ಇದರಿಂದ ದಾರಿ ಕಾಣದೆ ಕಂಗಾಲಾದ ವಿದ್ಯಾರ್ಥಿಗಳು ಕಂಗೆಡುವಂತಾಯ್ತು.
ಮಧ್ಯಾಹ್ನ 2 ಗಂಟೆಗೆ ನೀರಿನ ಪ್ರಮಾಣ ಇಳಿಮುಖವಾದಾಗ ಪರೀಕ್ಷಾ ಕೇಂದ್ರಕ್ಕೆ ತೆರಳಿದ್ರೆ, ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸದ ಪರಿಣಾಮ ದಾರಿ ಕಾಣದೆ ವಿದ್ಯಾರ್ಥಿಗಳು ಕೆಲ ಹೊತ್ತು ಪರದಾಡಿದ್ದಾರೆ. ನಂತರ ಸಹಾಯಕ ಆಯುಕ್ತ ರಮೇಶ ಕೋಲಾರ ಅವರನ್ನು ಸಂಪರ್ಕಿಸಿ, ಪಿಯು ಬೋರ್ಡ್ಗೆ ಮನವಿ ಪತ್ರ ರವಾನಿಸಲಾಗಿದೆ. ಅವರು ಬರುವ ದಿನಗಳಲ್ಲಿ ಪರೀಕ್ಷೆಯಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ಭರವಸೆ ನೀಡಿದ್ದಾರೆ.