ಕಲಬುರಗಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿದ ಬಜೆಟ್ ಜನಸಾಮಾನ್ಯರ ಜೇಬು ಕತ್ತರಿಸುವ ಬಜೆಟ್ ಆಗಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಅಸಹಾಯಕ ಮುಖ್ಯಮಂತ್ರಿಗಳಿಂದ ನಾಮಕಾವಾಸ್ತೆ ಬಜೆಟ್ ಮಂಡನೆ ಮಾಡಲಾಗಿದೆ ಎಂದು ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಳ್ಳುವ ಮೂಲಕ ಬಜೆಟ್ ವಿರೋಧಿಸಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ಈ ಬಾರಿಯೂ ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯ ಮಾಡಲಾಗಿದೆ. ಕೇಂದ್ರ ಸರ್ಕಾರದ ಜಿಎಸ್ಟಿಯಿಂದಾದ ಅನ್ಯಾಯ ಸರಿದೂಗಿಸಲು ರಾಜ್ಯ ಸರ್ಕಾರ ಜನಸಾಮಾನ್ಯರ ಬಳಿ ವಸೂಲಿಗೆ ನಿಂತಿದೆ ಎಂದು ಆರೋಪಿದ್ದಾರೆ.
ಪ್ರಿಯಾಂಕ್ ಖರ್ಗೆ ಫೇಸ್ಬುಕ್ ಪೋಸ್ಟ್ ಮಾತೆತ್ತಿದ್ರೆ ರೈತರ ಗುಣಗಾನ ಮಾಡುವ ಸಿಎಂ ಬಿಎಸ್ವೈ ಬಜೆಟ್ ಮಂಡಿಸುವಾಗ ರೈತರ ಸಾಲಮನ್ನಾ ಬಗ್ಗೆ ತುಟಿ ಬಿಚ್ಚಲಿಲ್ಲ. ಇದೊಂದು ದೂರ ದೃಷ್ಟಿ ಇಲ್ಲದ ಹಾಗೂ ಗೊತ್ತು ಗುರಿ ಇಲ್ಲದ ನೀರಸ ಬಜೆಟ್ ಎಂದು ಆಕ್ರೋಶ ಹೊರ ಹಾಕಿದ್ದಾರೆ.