ಕಲಬುರಗಿ:ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಬಾಲಕನ ಕುಟುಂಬಕ್ಕೆ ಮಾಜಿ ಸಚಿವ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಪರಿಹಾರ ಚೆಕ್ ವಿತರಿಸಿದ್ದಾರೆ.
ವಿದ್ಯುತ್ ಸ್ಪರ್ಶದಿಂದ ಬಾಲಕ ಸಾವು: ಕುಟುಂಬಕ್ಕೆ ಪರಿಹಾರ ಚೆಕ್ ನೀಡಿದ ಪ್ರಿಯಾಂಕ್ ಖರ್ಗೆ - ವಿದ್ಯುತ್ ತಂತಿ
ಮಹ್ಮದ್ ಕೈಫ್ ಕ್ರಿಕೆಟ್ ಆಡುವ ವೇಳೆ ಚೆಂಡು ತರಲೆಂದು ಶಾಲೆಯ ಮೇಲ್ಛಾವಣಿಗೆ ಹೋದಾಗ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ. ಈ ಹಿನ್ನಲೆ ಶಾಸಕ ಪ್ರಿಯಾಂಕ್ ಖರ್ಗೆ ಅವರು ಬಾಲಕ ಕುಟುಂಬದ ಸದಸ್ಯರಿಗೆ ಪರಿಹಾರ ಚೆಕ್ ವಿತರಿಸಿ, ಸಾಂತ್ವನ ಹೇಳಿದ್ದಾರೆ.
ಪ್ರಿಯಾಂಕ್ ಖರ್ಗೆ
ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದ ಬಾಲಕ ಮಹ್ಮದ್ ಕೈಫ್ ಕ್ರಿಕೆಟ್ ಆಡುವ ವೇಳೆ ಚೆಂಡು ತರಲೆಂದು ಶಾಲೆಯ ಮೇಲ್ಛಾವಣಿಗೆ ಹೋದಾಗ ವಿದ್ಯುತ್ ತಂತಿ ತಗುಲಿ ಮಹ್ಮದ್ ಕೈಫ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ. ಈ ಹಿನ್ನೆಲೆಯಲ್ಲಿ ಜೆಸ್ಕಾಂ ವತಿಯಿಂದ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ. ಈ ಪರಿಹಾರದ ಚೆಕ್ ನ್ನು ಶಾಸಕ ಪ್ರಿಯಾಂಕ್ ಖರ್ಗೆ ಅವರು ಬಾಲಕನ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಿ, ಸಾಂತ್ವನ ಹೇಳಿದರು.