ಕಲಬುರಗಿ: ರೈಲ್ವೆ ಹಳಿಗೆ ತಲೆ ಕೊಟ್ಟು ಖಾಸಗಿ ನ್ಯೂಸ್ ಚಾನೆಲ್‌ವೊಂದರ ಕ್ಯಾಮರಮನ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಹೊರವಲಯದ ಪಿಡಿಎ ಎಂಜಿನಿಯರಿಂಗ್ ಕಾಲೇಜು ಬಳಿ ನಡೆದಿದೆ.
ರೈಲಿಗೆ ತಲೆ ಕೊಟ್ಟು ಖಾಸಗಿ ಸುದ್ದಿ ವಾಹಿನಿ ಕ್ಯಾಮರಾಮೆನ್ ಆತ್ಮಹತ್ಯೆ - ಕ್ಯಾಮರಾಮೆನ್ ಹನುಮಂತ್‌ರಾವ್ ಆತ್ಮಹತ್ಯೆ
ವೈಯಕ್ತಿಕ ಸಮಸ್ಯೆಗಳಿಂದ ಮನನೊಂದು ಕ್ಯಾಮರಾಮೆನ್ ಹನುಮಂತ್‌ರಾವ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಹನುಮಂತ್‌ರಾವ್ (42) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಹನುಮಂತ್‌ರಾವ್ ಕಲಬುರಗಿ ಮೂಲದವರಾಗಿದ್ದು, ಕಲಬುರಗಿ, ಬೆಂಗಳೂರು ಸೇರಿದಂತೆ ವಿವಿಧ ಖಾಸಗಿ ಚಾನೆಲ್‌ಗಳಲ್ಲಿ ಕ್ಯಾಮರಮನ್ ಆಗಿ ಕೆಲಸ ಮಾಡಿದ್ದಾರೆ. ವೈಯಕ್ತಿಕ ಸಮಸ್ಯೆಗಳಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳದಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿದೆ. ಮದ್ಯ ಸೇವಿಸಿ ನಂತರ ರೈಲು ಬರುವ ವೇಳೆ ಹಳಿಗೆ ತೆಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಂತೆ ಕಂಡುಬಂದಿದೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರೀಶಿಲನೆ ಮಾಡಿದ್ದಾರೆ. ಈ ಕುರಿತು ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.