ಕಲಬುರಗಿ:ಮರಳು ಸಾಗಣೆಗೆ ಅನುಮತಿ ನೀಡಲು ಲಂಚ ಪಡೆಯುವಾಗ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದ ಇಬ್ಬರು ಪೋಲಿಸ್ ಕಾನ್ಸ್ಟೇಬಲ್ಗಳನ್ನು ಅಮಾನತುಗೊಳಿಸಿ ಎಸ್ಪಿ ಇಶಾ ಪಂತ್ ಆದೇಶ ಹೊರಡಿಸಿದ್ದಾರೆ.
ಜೇವರ್ಗಿ ಠಾಣೆಯ ಕಾನ್ಸ್ಟೇಬಲ್ ಶಿವರಾಯ ಅರಳಗುಂಡಗಿ ಹಾಗೂ ಅವ್ವಣ್ಣ ಅಮಾನತುಗೊಂಡವರು. ಮರಳು ಸಾಗಣೆಗೆ ಅನುಮತಿ ನೀಡಲು ಶಹಾಪುರ ಮೂಲದ ಅಖಿಲ್ ಎಂಬುವರಿಗೆ ಲಂಚದ ಬೇಡಿಕೆ ಇಟ್ಟಿದ್ದರು. ಅಂತೆಯೇ ಗುರುವಾರ ಹಣ ಪಡೆಯುವಾಗ ಲೋಕಾಯುಕ್ತರು ಟ್ರ್ಯಾಪ್ ಮಾಡಿ ಕಾನ್ಸ್ಟೇಬಲ್ ಶಿವರಾಯ ಅರಳಗುಂಡಗಿಯನ್ನು ಬಲೆಗೆ ಕೆಡವಿದ್ದರು. ಪ್ರಕರಣದಲ್ಲಿ ಅವ್ವಣ್ಣ ಕೂಡ ಭಾಗಿಯಾಗಿದ್ದರು. ಇಬ್ಬರನ್ನು ಅ.6 ರವರೆಗೂ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.