ಕಲಬುರಗಿ:ಉತ್ತರ ಭಾರತದಲ್ಲಿ ಪ್ರತಿಕೂಲ ವಾತಾವರಣ ಹಿನ್ನೆಲೆ ಪೈಲಟ್ ತರಬೇತಿಯನ್ನು ಕಲಬುರಗಿ ವಿಮಾನ ನಿಲ್ದಾಣಕ್ಕೆ ಶಿಫ್ಟ್ ಮಾಡಲಾಗಿದೆ.
ಇಂದಿರಾಗಾಂಧಿ ರಾಷ್ಟ್ರೀಯ ಉಡಾನ್ ಅಕಾಡೆಮಿ ವತಿಯಿಂದ ಪೈಲಟ್ ಟ್ರೈನಿಂಗ್ ನೀಡಲಾಗುತ್ತಿದೆ. ಮತ್ತೊಂದೆಡೆ ಕೇಂದ್ರ ಸರ್ಕಾರದ ಆತ್ಮನಿರ್ಭರ ಯೋಜನೆ ಅಡಿ ಪೈಲಟ್ ತರಬೇತಿ ಕೂಡ ಇಲ್ಲಿಯೇ ಮುನ್ನಡೆಸುವ ಚಿಂತನೆ ನಡೆಸಲಾಗುತ್ತಿದೆ.
ಈಗಾಗಲೇ ಅರ್ಜಿಗಳನ್ನು ಆಹ್ವಾನಿಸಿರುವ ಮಿನಿಸ್ಟ್ರಿ ಆಫ್ ಸಿವಿಲ್ ಏವಿಯೇಷನ್ ಐಜಿಆರ್ಯುಎ ಸೇರಿ ಎರಡು ಸಂಸ್ಥೆಗಳಿಂದ ಅರ್ಜಿ ಸ್ವೀಕರಿಸಲಾಗಿದೆ. ಸದ್ಯ ಕಲಬುರಗಿಗೆ ನಾಲ್ಕು ಪೈಲಟ್ ತರಬೇತಿ ವಿಮಾನ ಆಗಮಿಸಿದ್ದು. ಆರು ಜನ ತರಬೇತುದಾರರಿಂದ 12 ಜನರಿಗೆ ತರಬೇತಿ ನೀಡಲಾಗುತ್ತಿದೆ.
ಇದನ್ನೂ ಓದಿ:ಏರ್ಪೋರ್ಟ್ ಸಿಬ್ಬಂದಿ ಫ್ರಂಟ್ ಲೈನ್ ವಾರಿಯರ್ಸ್ ಅಲ್ಲ: ಆದೇಶ ಹಿಂಪಡೆದ ಆರೋಗ್ಯ ಇಲಾಖೆ
ಕಲಬುರಗಿ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ ಕೇಂದ್ರ ಸರ್ಕಾರದ ಪ್ರತಿನಿಧಿಗಳು ಹಾಗೂ ಮಿನಿಸ್ಟ್ರಿ ಆಫ್ ಸಿವಿಲ್ ಏವಿಯೇಷನ್ ಇಲಾಖೆ ಕಾರ್ಯದರ್ಶಿ ಪ್ರದೀಪ್ ಸಿಂಗ್ ಖರೋಲಾ ತರಬೇತಿ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿದರು. ಮುಂದಿನ ದಿನಗಳಲ್ಲಿ ಮತ್ತಷ್ಟು ತರಬೇತಿ ವಿಮಾನ ಕಳುಹಿಸಿಕೊಡುವುದಾಗಿ ಖರೋಲಾ ಭರವಸೆ ನೀಡಿದ್ದಾರೆ.