ಕರ್ನಾಟಕ

karnataka

ETV Bharat / state

ಈಶಾನ್ಯ ಸಾರಿಗೆ ಪ್ರಯಾಣಿಕರಿಗೆ ಹೋಟೆಲ್​, ಡಾಬಾಗಳಲ್ಲಿ ಕಳಪೆ ಊಟ: ಸಿಬ್ಬಂದಿ ಒಳ ಒಪ್ಪಂದ ಆರೋಪ

ಕೆಎಸ್​ಆರ್​ಟಿಸಿ ಇಲಾಖೆ ಪ್ರಯಾಣಿಕರಿಗಾಗಿ ನಿಗದಿಪಡಿಸಿದ ಹೋಟೆಲ್ ಹಾಗೂ ಡಾಬಾಗಳು ಕಳಪೆಮಟ್ಟದಾಗಿದೆ ಎಂದು ಪ್ರಯಾಣಿಕರೊಬ್ಬರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಕೆಎಸ್​ಆರ್​ಟಿಸಿ ಇಲಾಖೆ ಸಿಬ್ಬಂದಿ ಹೋಟೆಲ್ ಮಾಲೀಕರ ಜೊತೆ ಒಳಒಪ್ಪಂದ ಆರೋಪ

By

Published : Oct 5, 2019, 2:05 PM IST

ಕಲಬುರಗಿ:ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಪ್ರಯಾಣಿಕರಿಗಾಗಿ ಮಾರ್ಗ ಮಧ್ಯೆ ನಿಗದಿಪಡಿಸಿರುವ ಹೋಟೆಲ್ ಮತ್ತು ಡಾಬಾಗಳಲ್ಲಿ ಕಳಪೆ ಮಟ್ಟದ ಆಹಾರ ಸಿಗುತ್ತದೆ ಎಂದು ಪ್ರಯಾಣಿಕರೋರ್ವರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಕೆಎಸ್​ಆರ್​ಟಿಸಿ ಇಲಾಖೆ ಸಿಬ್ಬಂದಿ ಹೋಟೆಲ್ ಮಾಲೀಕರ ಜೊತೆ ಒಳಒಪ್ಪಂದ ಆರೋಪ

ಈ ಕುರಿತು ಸಂದೀಪ್ ಕುಮಾರ್ ಎಂಬುವವರು ಗಂಭೀರ ಆರೋಪ ಮಾಡಿದ್ದು, ಕೆಎಸ್​ಆರ್​ಟಿಸಿ ಇಲಾಖೆ ಸಿಬ್ಬಂದಿ ಹೋಟೆಲ್ ಡಾಬಾ ಮಾಲೀಕರ ಜೊತೆ ಒಳ ಒಪ್ಪಂದ ಮಾಡಿಕೊಂಡು ದುಬಾರಿ ಹಣ ಪಡೆದು, ಕಳಪೆ ಮಟ್ಟದ ಆಹಾರ ಸಿಗುವಂತ ಹೋಟೆಲ್​ಗಳಲ್ಲಿ ಉಪಾಹಾರಕ್ಕೆ ಬಸ್​ ನಿಲ್ಲಿಸುತ್ತಾರೆ. ಇದನ್ನು ಪ್ರಶ್ನಿಸಿದರೆ ಹೋಟೆಲ್ ಮಾಲೀಕರು ಅಸಭ್ಯವಾಗಿ ವರ್ತಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details