ಕರ್ನಾಟಕ

karnataka

ETV Bharat / state

ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ; ಮೆದುಳು ನಿಷ್ಕ್ರಿಯಗೊಂಡಿದ್ದವನ ಅಂಗಾಂಗ ದಾನ

ಮಹಡಿಯಿಂದ ಬಿದ್ದಿದ್ದ ಯುವಕ ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಆತನ ಅಂಗಾಂಗ ದಾನಕ್ಕೆ ಕುಟುಂಬಸ್ಥರು ನಿರ್ಧರಿಸಿ ಇಂದು ಕಲಬುರಗಿಯಿಂದ ಹೈದರಾಬಾದ್​​ಗೆ ಅಂಗಾಂಗ ರವಾನೆಯಾಗಿದೆ. ಮೆದುಳು ನಿಷ್ಕ್ರಿಯ ಹಿನ್ನೆಲೆ ಕುಟುಂಬಸ್ಥರು ಅಂಗಾಂಗ ದಾನ ಮಾಡಿದ ಬಳಿಕ ಸ್ವಗ್ರಾಮದಲ್ಲಿ ಯುವಕನ ಅಂತಿಮ ವಿಧಿವಿಧಾನ ನೆರವೇರಿಸಿದ್ದಾರೆ.

parents-who-donate-organ-donation-to-a-young-man-whose-brain-is-disabled
ಮೆದುಳು ನಿಷ್ಕ್ರಿಯಗೊಂಡಿದ್ದ ಯುವಕನ ಅಂಗಾಂಗ ದಾನಕ್ಕೆ ಮುಂದಾದ ಪೋಷಕರು

By

Published : Aug 28, 2021, 1:43 PM IST

Updated : Aug 28, 2021, 1:54 PM IST

ಕಲಬುರಗಿ:ಆಯ ತಪ್ಪಿ ಮನೆ ಮೇಲಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆ ಆತನ ಅಂಗಾಗ ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಹೀಗಾಗಿ ಇಂದು ಕಲಬುರಗಿಯಿಂದ ಹೈದರಾಬಾದ್‌ಗೆ ಝೀರೋ ಟ್ರಾಫಿಕ್​​ನಲ್ಲಿ ಯುವಕನ ಅಂಗಾಗ ರವಾನಿಸಲಾಯಿತು.

ಕಲಬುರಗಿಯಿಂದ ಹೈದರಾಬಾದ್‌ಗೆ ಝೀರೋ ಟ್ರಾಫಿಕ್​​ನಲ್ಲಿ ಯುವಕನ ಅಂಗಾಂಗ ರವಾನೆ

ಆಳಂದ ತಾಲೂಕಿನ ಲಾಡಮುಗಳಿ ಗ್ರಾಮದ 19 ವರ್ಷದ ಮಹೇಶ ಮನೆಯ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ಕಳೆದ 7 ದಿನಗಳಿಂದ ಚಿಕಿತ್ಸೆ ನೀಡುತ್ತಿದ್ದರೂ ಯಾವುದೇ ರೀತಿಯ ಸ್ಪಂದನೆ ವ್ಯಕ್ತವಾಗಿರಲಿಲ್ಲ. ಯುವಕನ ಮೆದುಳು ಸಿಷ್ಕ್ರಿಯವಾಗಿದ್ದ ಹಿನ್ನೆಲೆಯಲ್ಲಿ ಪೋಷಕರು ಅಂಗಾಂಗ ದಾನ ಮಾಡಿ ಬೇರೊಂದು ಜೀವ ಉಳಿಸುವ ಕೆಲಸ ಮಾಡಿದ್ದಾರೆ. ಯುವಕನ ಲಿವರ್ ಅನ್ನು ಝೀರೋ ಟ್ರಾಫಿಕನಲ್ಲಿ ಹೈದ್ರಾಬಾದ್​​ಗೆ ರವಾನಿಸಲಾಗಿದೆ.

ಇದೀಗ ಹೈದರಾಬಾದ್‌ನಿಂದ ಏರ್​​ಲಿಫ್ಟ್ ಮೂಲಕ ಬೆಂಗಳೂರಿನ ಜೆಪಿ ನಗರದ ಆಸ್ಟರ್ ಆರ್.ವಿ ಆಸ್ಪತ್ರೆಗೆ ಲಿವರ್‌ ರವಾನೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

Last Updated : Aug 28, 2021, 1:54 PM IST

ABOUT THE AUTHOR

...view details