ಕಲಬುರಗಿ:ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದು, ಇದರೊಂದಿಗೆ ಬಂಧಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಕಿಂಗ್ಪಿನ್ ಜೊತೆ ನಿಕಟ ಸಂಪರ್ಕ ಹೊಂದಿದ್ದ ಜ್ಯೋತಿ ಪಾಟೀಲ್ ಎಂಬುವಳೆ ಬಂಧಿತ ಆರೋಪಿಯಾಗಿದ್ದಾಳೆ.
ಜ್ಯೋತಿ ಅಭ್ಯರ್ಥಿ ಶಾಂತಿಬಾಯಿ ಅಕ್ರಮದಿಂದ ನೇರವಾಗಿ ಆಯ್ಕೆಯಾಗಲು ನೆರವಾಗಿದ್ದಳು ಎನ್ನಲಾಗಿದೆ. ಪಿಎಸ್ಐ ನೇಮಕಾತಿ ಅಕ್ರಮ ಪಟ್ಟಿಯಲ್ಲಿ ಹೆಸರು ಹೊಂದಿರುವ ಶಾಂತಿಬಾಯಿ ಸದ್ಯ ನಾಪತ್ತೆಯಾಗಿದ್ದಾಳೆ. ತಲೆಮರೆಸಿಕೊಂಡಿರುವ ಇನ್ನೊಬ್ಬ ಕಿಂಗ್ಪಿನ್ ಇಂಜಿನಿಯರ್ ಮಂಜುನಾಥ್ ಪಾಟೀಲ್ಗೆ ಶಾಂತಿಬಾಯಿಯನ್ನು ಭೇಟಿ ಮಾಡಿಸಿರುವುದು ಕೂಡ ಆರೋಪಿ ಜ್ಯೋತಿ ಪಾಟೀಲ್ ಎಂದು ತಿಳಿದುಬಂದಿದೆ.