ಕರ್ನಾಟಕ

karnataka

ETV Bharat / state

ಕಲಬುರಗಿ ನಿಲ್ದಾಣದಲ್ಲಿ ವೃದ್ಧೆ ಮೇಲೆ ಹರಿದ ಬಸ್ - ಕೇಂದ್ರ ಬಸ್ ನಿಲ್ದಾಣ

ಕಲಬುರಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ವೃದ್ಧೆ ಮೇಲೆ ಬಸ್ ಹರಿದ ಪರಿಣಾಮ ಬಿದ್ದಾಪುರ ಕಾಲೋನಿ ನಿವಾಸಿ ಪಾರ್ವತಿ ಬಿರಾದಾರ (60) ಮೃತಪಟ್ಟಿದ್ದಾರೆ.

bus accident
ಕಲಬುರಗಿ ಕೇಂದ್ರ ಬಸ್ ನಿಲ್ದಾಣ

By

Published : Oct 9, 2022, 11:23 AM IST

ಕಲಬುರಗಿ: ನಗರ ಸಾರಿಗೆ ಬಸ್ ಹರಿದ ಪರಿಣಾಮ ಸ್ಥಳದಲ್ಲೇ ವೃದ್ಧೆ ಸಾವನ್ನಪ್ಪಿರುವ ಘಟನೆ ಕಲಬುರಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.

ಬಿದ್ದಾಪುರ ಕಾಲೋನಿ ನಿವಾಸಿ ಪಾರ್ವತಿ ಬಿರಾದಾರ (60) ಮೃತ ದುರ್ದೈವಿ. ಇವರು ಮನೆ ಕೆಲಸ ಮಾಡಿಕೊಂಡು ಉಪಜೀವನ ನಡೆಸುತ್ತಿದ್ದರು. ಪ್ರತಿನಿತ್ಯ ಕೇಂದ್ರ ಬಸ್ ನಿಲ್ದಾಣದಿಂದ ನಗರ ಸಾರಿಗೆ ಬಸ್ ಮೂಲಕ ಸಂಗಮೇಶ್ವರ ಕಾಲೋನಿಗೆ ತೆರಳಿ ಮನೆ ಕೆಲಸಕ್ಕೆ ಹೋಗುತ್ತಿದ್ದರು. ಎಂದಿನಂತೆ ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಬಸ್ ನಿಲ್ದಾಣಕ್ಕೆ ಬಂದಾಗ ದುರ್ಘಟನೆ ಸಂಭವಿಸಿದೆ.

ಇದನ್ನೂ ಓದಿ:ಧಗಧಗನೆ ಉರಿದ ಖಾಸಗಿ ಬಸ್​.. ಮಕ್ಕಳು ಸೇರಿ 14 ಮಂದಿ ಸಜೀವ ದಹನ

ಚಾಲಕ ಎಡದಿಂದ ಬಲಕ್ಕೆ ಬಸ್ ತಿರುಗಿಸಿಕೊಳ್ಳುವಾಗ ಅಜ್ಜಿಗೆ ತಗುಲಿದೆ. ಈ ವೇಳೆ ಆಯತಪ್ಪಿ ವೃದ್ಧೆ ಬಸ್ ಕೆಳಗಡೆ ಬಿದ್ದಿದ್ದಾರೆ. ನೋಡು ನೋಡುತ್ತಿದ್ದಂತೆ ವೃದ್ಧೆಯ ಮೇಲೆ ಟೈಯರ್​ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಕುರಿತು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details