ಕಲಬುರಗಿ:ನಗರದ ತಾಜಸುಲ್ತಾನಪೂರ ರಸ್ತೆಯಲ್ಲಿರುವ ಹಮಾಲ್ ವಾಡಿ ಬಡಾವಣೆಯಲ್ಲಿ ನಡೆಯಲಿದ್ದ ಅಪ್ರಾಪ್ತ ಬಾಲಕಿಯ ಮದುವೆಯನ್ನು ತಡೆಯುವಲ್ಲಿ ಮಕ್ಕಳ ರಕ್ಷಣಾ ತಂಡ ಯಶಸ್ವಿಯಾಗಿದೆ.
ಕಲಬುರಗಿಯಲ್ಲಿ ಬಾಲ್ಯ ವಿವಾಹಕ್ಕೆ ಬ್ರೇಕ್ ಹಾಕಿದ ಅಧಿಕಾರಿಗಳು
ಕಲಬುರಗಿಯಲ್ಲಿ ಅಪ್ರಾಪ್ತ ಬಾಲಕಿಯ ಮದುವೆಯನ್ನು ತಡೆಯುವಲ್ಲಿ ಮಕ್ಕಳ ರಕ್ಷಣಾ ತಂಡ ಯಶಸ್ವಿಯಾಗಿದೆ. ಬಾಲಕಿಯನ್ನು ರಕ್ಷಿಸಿ ಸರ್ಕಾರಿ ಬಾಲಕಿಯರ ಬಾಲ ಮಂದಿರಕ್ಕೆ ದಾಖಲಿಸಲಾಗಿದೆ.
ಬಾಲ್ಯವಿವಾಹಕ್ಕೆ ಬ್ರೇಕ್
ನಗರದ ಹಮಾಲ್ ವಾಡಿ ಬಡಾವಣೆಯಲ್ಲಿ ಅಪ್ರಾಪ್ತ ಬಾಲಕಿಗೆ ಮದುವೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ವಿಷಯ ಅರಿತ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಭೀಮಾರಾಯ ಕಣ್ಣೂರ್, ನಗರ ಶಿಶು ಅಭಿವೃದ್ಧಿ ಯೋಜನೆಯ ಹಿರಿಯ ಮೇಲ್ವಿಚಾರಕಿ ಸತ್ಯಮ್ಮ, ಸಂಸ್ಕಾರ ಪ್ರತಿಷ್ಠಾನ ನಿರ್ದೇಶಕ ವಿಠ್ಠಲ್ ಚಿಕಣಿ ಸೇರಿದಂತೆ ಸಿಬ್ಬಂದಿ ಹಾಗೂ ಪೊಲೀಸರು ವಿವಾಹ ತಡೆದಿದ್ದಾರೆ. ಬಾಲಕಿಯ ಮನೆಗೆ ಭೇಟಿ ನೀಡಿ ಪೋಷಕರಿಗೆ ಕಾನೂನು ಅರಿವು ಮೂಡಿಸಿ ಬಾಲಕಿಯ ಮದುವೆ ತಡೆಯಲಾಗಿದೆ.ಸದ್ಯ ಬಾಲಕಿಯನ್ನು ರಕ್ಷಿಸಿ ಸರ್ಕಾರಿ ಬಾಲಕಿಯರ ಬಾಲ ಮಂದಿರಕ್ಕೆ ದಾಖಲಿಸಲಾಗಿದೆ.