ಕಲಬುರಗಿ:ಹೃದಯಾಘಾತದಿಂದ ಸಾವಿಗೀಡಾದಮಹಿಳೆಯ ಮೃತದೇಹವನ್ನ ಬೆಂಗಳೂರಿನಿಂದ ಕಲಬುರಗಿಗೆ ಸಾಗಿಸಲು ಹಾಗೂ ಮೃತರ ಸಂಬಂಧಿಗಳ ಪ್ರಯಾಣಕ್ಕೆ ಪೊಲೀಸ್ ಇಲಾಖೆಯಿಂದ ಅನುಮತಿ ಕೊಡಿಸುವ ಮೂಲಕ ಸಂಸದ ಡಾ.ಉಮೇಶ್ ಜಾಧವ್ ಮಾನವೀಯತೆ ಮೆರೆದಿದ್ದಾರೆ.
ಬೆಂಗಳೂರಿನಿಂದ ಕಲಬುರಗಿಗೆ ಮೃತದೇಹ ಸಾಗಿಸಲು ನೆರವಾದ ಸಂಸದ ಜಾಧವ್ - kalburagi news
ಬೆಂಗಳೂರಿನ ಅಮೃತಹಳ್ಳಿಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದ ಮಹಿಳೆಯ ಮೃತದೇಹವನ್ನು ಕಲಬುರಗಿಗೆ ಸಾಗಿಸಲು ಹಾಗೂ ಮೃತರ ಸಂಬಂಧಿಗಳ ಪ್ರಯಾಣಕ್ಕೆ ಪೊಲೀಸ್ ಇಲಾಖೆಯಿಂದ ಅನುಮತಿ ಕೊಡಿಸುವ ಮೂಲಕ ಸಂಸದ ಡಾ.ಉಮೇಶ್ ಜಾಧವ್ ಮಾನವೀಯತೆ ಮೆರೆದಿದ್ದಾರೆ.
ಗುರುವಾರ ಬೆಳಗ್ಗೆ 56 ವರ್ಷದ ದ್ರೌಪದಿ ಎಂಬ ಮಹಿಳೆ ಬೆಂಗಳೂರಿನ ಅಮೃತಹಳ್ಳಿಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಬಳಿಕ ಅವರ ಮೃತದೇಹ ಕಲಬುರಗಿಯ ಬಸವನಗರಕ್ಕೆ ತೆಗದುಕೊಂಡು ಹೋಗಲು ಅನುಮತಿಗಾಗಿ ಸಂಬಂಧಿಕರು ಪ್ರಯತ್ನ ನಡೆಸಿದ್ದರು. ಈ ವಿಷಯ ತಿಳಿದ ಸಂಸದ ಉಮೇಶ್ ಜಾಧವ್, ಸ್ಥಳಕ್ಕೆ ತೆರಳಿ ಬೆಂಗಳೂರಿನ ಈಶಾನ್ಯ ವಲಯ ಉಪ ಪೊಲೀಸ್ ಆಯುಕ್ತರಿಂದ ಮೃತದೇಹ ಸಾಗಿಸಲು ಹಾಗೂ ಆ್ಯಂಬುಲೆನ್ಸ್ನಲ್ಲಿ ಸಂಬಂಧಿಕರಿಗೆ ಪ್ರಯಾಣಿಸಲು ಅನುಮತಿ ಕೊಡಿಸಿದ್ದಾರೆ.
ಆ್ಯಂಬುಲೆನ್ಸ್ ಬಾಡಿಗೆ ಸಹ ಜಾಧವ್ ಅವರೇ ನೀಡಿ ಮಾನವಿಯತೆ ಮೆರೆದಿದ್ದು,ತಮ್ಮ ಕಷ್ಟಕ್ಕೆ ನೆರವಾದ ಸಂಸದರಿಗೆ ಮೃತರ ಸಂಬಂಧಿಕರು ಕೃತಜ್ಞತೆ ಸಲ್ಲಿಸಿದ್ದಾರೆ.