ಕರ್ನಾಟಕ

karnataka

ETV Bharat / state

ಕಾಣೆಯಾಗಿದ್ದ ಯುವಕ ಶವವಾಗಿ ಪತ್ತೆ... ಕೊಲೆಗೆ ಕಾರಣವಾಯ್ತ ಅನೈತಿಕ ಸಂಬಂಧ? - etv bharath

ಇಬ್ಬರು ಯುವಕರು ಕೆಲಸ ಇದೆ ಎಂದು ಅಮಿನುದ್ದಿನ್​ನನ್ನು ಕರೆದೊಯ್ದು ಕೊಲೆ ಮಾಡಿ ಬಿಸಾಡಿದ್ದಾರೆ ಎಂದು ರೋಜಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆಯಾದ ಅಮಿನುದ್ದಿನ್ ಕುಟುಂಬಸ್ಥರು ಪ್ರಕರಣ ದಾಖಲಿಸಿದ್ದಾರೆ.

ಕೊಲೆಯಾದ ಯುವಕ

By

Published : Mar 12, 2019, 9:45 AM IST

ಕಲಬುರಗಿ: ಕಳೆದೆರಡು ದಿನಗಳ ಹಿಂದೆ ಕಾಣೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಮಹಾಗಾಂವ್​ ರೈಲ್ವೆ ಬ್ರಿಡ್ಜ್‌ ಹತ್ತಿರ ನಡೆದಿದೆ.

ರೋಜಾ ಬಡಾವಣೆಯ ನಯಾಮೊಹಲ್ಲಾ ನಿವಾಸಿ ಅಮಿನುದ್ದಿನ್ (21) ಕೊಲೆಯಾದ ಯುವಕ. ಕಲ್ಲಿನಿಂದ ಜಜ್ಜಿ ಅಮಿನುದ್ದಿನ್ ಕೊಲೆ ಮಾಡಿ ಬಿಸಾಡಲಾಗಿದೆ. ಕೊಲೆಗೆ ಅನೈತಿಕ ಸಂಬಂಧವೇ ಕಾರಣ ಎನ್ನಲಾಗ್ತಿದೆ.

ಇಬ್ಬರು ಯುವಕರು ಕೆಲಸ ಇದೆ ಎಂದು ಅಮಿನುದ್ದಿನ್​ನನ್ನು ಕರೆದೊಯ್ದು ಕೊಲೆ ಮಾಡಿ ಬಿಸಾಡಿದ್ದಾರೆ ಎಂದು ರೋಜಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆಯಾದ ಅಮಿನುದ್ದಿನ್ ಕುಟುಂಬಸ್ಥರು ಪ್ರಕರಣ ದಾಖಲಿಸಿದ್ದಾರೆ.

ಕಳೆದೆರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಅಮಿನುದ್ದಿನ್​ ಇದೀಗ ಹೆಣವಾಗಿ ಪತ್ತೆಯಾಗಿದ್ದಾನೆ ಎಂದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸದ್ಯ ರೋಜಾ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗೆ ಪತ್ತೆಗೆ ಬಲೆ ಬೀಸಿದ್ದಾರೆ.

ABOUT THE AUTHOR

...view details