ಕರ್ನಾಟಕ

karnataka

ETV Bharat / state

ಸಾಮೂಹಿಕ ನಕಲು .. ಆಡಳಿತ ಮಂಡಳಿಯಿಂದಲೇ  ಸಹಕಾರ ಆರೋಪ - ಎಸ್.ಎಸ್.ಎಲ್.ಸಿ

ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ನಕಲು ಮಾಡಲು ಪರೀಕ್ಷಾ ಕೇಂದ್ರದ ಆಡಳಿತ ಮಂಡಳಿಯೇ ಸಹಕಾರ ನೀಡಿದೆ ಎಂಬ ಆರೋಪ ಕೇಳಿಬಂದಿದೆ.

ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ನಕಲು ಮಾಡಲು ಪರೀಕ್ಷಾ ಕೇಂದ್ರದ ಆಡಳಿತ ಮಂಡಳಿಯೇ ಸಹಕಾರ

By

Published : Mar 22, 2019, 4:46 AM IST

ಕಲಬುರಗಿ : ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿರುವ ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭಗೊಂಡಿವೆ. ಪ್ರಥಮ ದಿನವಾದ ನಿನ್ನೆ ಸಾಮೂಹಿಕ ನಕಲು ಮಾಡಿರುವ ಘಟನೆ ಅಫಜಲಪುರ ತಾಲೂಕಿನ ಮಣ್ಣೂರು ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.

ಕೇಲ ಮೇಲ್ವಿಚಾರಕರು ಕಾಪಿ ಚೀಟಿ, ಗೈಡ್ ಗಳನ್ನು ಕಸಿದುಕೊಂಡಿದ್ದಾರೆ. ಆದರೆ, ಪರೀಕ್ಷಾ ಕೇಂದ್ರದಲ್ಲಿ ಬಹುತೇಕ ವಿದ್ಯಾರ್ಥಿಗಳು ನಕಲು ಮಾಡಿದ್ದಾರೆನ್ನಲಾಗಿದೆ. ಗಮನಾರ್ಹ ವಿಷಯ ಅಂದ್ರೆ ಪರೀಕ್ಷಾ ಕೇಂದ್ರದ ಆಡಳಿತ ಮಂಡಳಿಯೇ ನಕಲಿಗೆ ಸಹಕಾರ ನೀಡಿದೆ ಎಂಬ ಆರೋಪ ಕೇಳಿಬಂದಿದೆ.

ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ನಕಲು ಮಾಡಲು ಸಹಕಾರ

ಮಣ್ಣೂರ ಪರೀಕ್ಷಾ ಕೇಂದ್ರದಲ್ಲಿ 298 ವಿದ್ಯಾರ್ಥಿಗಳ ಪೈಕಿ 296 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇಬ್ಬರು ಪರೀಕ್ಷಾರ್ಥಿಗಳು ಗೈರು ಹಾಜರಾಗಿದ್ದಾರೆ.

ಸಮರ್ಪಕವಾದ ಪೊಲೀಸ್ ಬಂದೋಬಸ್ತ್ ಇಲ್ಲದೇ ಇದ್ದುದರಿಂದ ವಿದ್ಯಾರ್ಥಿಗಳ ಗೆಳೆಯರು, ಪೋಷಕರು ಕಿಟಕಿಗಳಿಂದ ಚೀಟಿ ಕೊಡುವ ಮೂಲಕ ರಾಜಾರೋಷವಾಗಿ ನಕಲು ಮಾಡಲು ಸಹಕರಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕಾದ ಅಫಜಲಪುರ ಬಿಇಓ ವಸಂತ ರಾಠೋಡ ನಿರ್ಲಕ್ಷ ವಹಿಸಿದ್ದರಿಂದ ಸಾಮೂಹಿಕ ನಕಲು ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ABOUT THE AUTHOR

...view details